ಕುಂಬಳೆಯಲ್ಲಿ ವ್ಯಾಪಾರಿಗಳಿಂದ ಅಂಗಡಿ ಬಂದ್ ಪ್ರತಿಭಟನೆ ಮತ್ತು ಪಂಚಾಯತ್ ಕಚೇರಿಗೆ ಮೆರವಣಿಗೆ

ಕಾಸರಗೋಡು: ಕುಂಬಳೆಯ ಹಳೆಯ ಬಸ್ ನಿಲ್ದಾಣವನ್ನು ಪ್ರಯಾಣಿಕರ ಬಳಕೆಗೆ ತೆರೆಯಬೇಕು, ನೆಲಸಮಗೊಳಿಸಲಾದ ಕುಂಬಳೆ ಬಸ್ ನಿಲ್ದಾಣವನ್ನು ಮರುನಿರ್ಮಿಸಿ ವ್ಯಾಪಾರಿಗಳನ್ನು ಪುನರ್ವಸತಿ ಮಾಡಬೇಕು, ಆಟೋ ರಿಕ್ಷಾಗಳಿಗೆ ಪಂಚಾಯತ್ ನೋಂದಣಿಯನ್ನು ಕಡ್ಡಾಯಗೊಳಿಸಬೇಕು, “ಟೇಕ್ ಎ ಬ್ರೇಕ್” ಹಾಗೂ ಮೀನು ಮಾರುಕಟ್ಟೆಯನ್ನು ತೆರೆಯಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟು ವ್ಯಾಪಾರಿ–ಉದ್ಯಮಿ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಕುಂಬಳೆ ಪೇಟೆಯಲ್ಲಿ ಮಧ್ಯಾಹ್ನದವರೆಗೆ ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆ ನಡೆಸಲಾಯಿತು.

ಅಂಗಡಿ ಬಂದ್ ಜೊತೆಗೆ ಖಾಸಗಿ ಬಸ್‌ಗಳ ಮುಷ್ಕರವೂ ನಡೆದಿದ್ದರಿಂದ ಕುಂಬಳೆ ಪೇಟೆ ಸಂಪೂರ್ಣ ಬಂದ್ ವಾತಾವರಣ ನಿರ್ಮಾಣವಾಗಿತ್ತು.
ವ್ಯಾಪಾರಿಗಳು ಕುಂಬಳೆ ಪಂಚಾಯತ್ ಕಚೇರಿಗೆ ನಡೆಸಿದ ಪ್ರತಿಭಟನಾ ಮೆರವಣಿಗೆಯನ್ನು ವ್ಯಾಪಾರಿ–ಉದ್ಯಮಿ ಸಮನ್ವಯ ಸಮಿತಿಯ ರಾಜ್ಯ ಉಪಾಧ್ಯಕ್ಷ ಕೆ. ಅಹ್ಮದ್ ಶರೀಫ್ ಉದ್ಘಾಟಿಸಿದರು. ರಾಜೇಶ್ ಮನಯತ್ ಅಧ್ಯಕ್ಷತೆ ವಹಿಸಿದ್ದರು. ಸತ್ತಾರ್ ಆರಿಕ್ಕಾಡಿ, ಅನ್ವರ್ ಸಿಟಿ, ಅಶ್ರಫ್ ಲತ್ ಹಾಗೂ ಸಿದ್ದೀಕ್ ಮುಬಾರಕ್ ಪ್ರತಿಭಟನೆಗೆ ನೇತೃತ್ವ ನೀಡಿದರು.

ಈ ಪ್ರತಿಭಟನೆಯಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್, ಟೈಲರ್ಸ್ ಅಸೋಸಿಯೇಷನ್, ಗೋಲ್ಡ್ ಅಂಡ್ ಸಿಲ್ವರ್ ಮರ್ಚೆಂಟ್ಸ್ ಅಸೋಸಿಯೇಷನ್ ಹಾಗೂ ಬಾರ್ಬರ್ಸ್ ಅಸೋಸಿಯೇಷನ್ ಕೂಡ ಭಾಗವಹಿಸಿ ಅಂಗಡಿ ಬಂದ್‌ಗೆ ಬೆಂಬಲ ಸೂಚಿಸಿವೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!