ಕೇರಳ ಗ್ರಾಮೀಣ ಬ್ಯಾಂಕ್ 14ನೇ ವಾರ್ಷಿಕೋತ್ಸವ: ಪಾವೂರು ಶಾಖೆಯಲ್ಲಿ ಕೇಕ್ ಕತ್ತರಿಸಿ ಸಂಭ್ರಮಾಚರಣೆ

ಮಂಜೇಶ್ವರ, ಜುಲೈ 8: ಕೇರಳದ “ಕೃಷಿಕರ ಬ್ಯಾಂಕ್” ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕೇರಳ ಗ್ರಾಮೀಣ ಬ್ಯಾಂಕ್ ತನ್ನ 14ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಅಂಗವಾಗಿ ಪಾವೂರು ಶಾಖೆಯಲ್ಲಿ ಬುಧವಾರ ಸರಳ ಹಾಗೂ ಅರ್ಥಪೂರ್ಣ ಕಾರ್ಯಕ್ರಮದ ಮೂಲಕ ವಾರ್ಷಿಕೋತ್ಸವವನ್ನು ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಖಾ ವ್ಯವಸ್ಥಾಪಕಿ ಶ್ರುತಿ ಸಿ. ವಹಿಸಿದ್ದರು. ತೀಯಾ ವೆಲ್ಫೇರ್ ಅಸೋಸಿಯೇಷನ್ ಕಾಸರಗೋಡು ಜಿಲ್ಲಾ ಅಧ್ಯಕ್ಷ ಗಣೇಶ್ ಪಾವೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಕೇಕ್ ಕತ್ತರಿಸುವ ಮೂಲಕ ಬ್ಯಾಂಕಿನ 14ನೇ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ತ್ಯಾಂಪಣ್ಣ ರೈ ಮುಟ್ಲ, ಡಾ. ಗಣೇಶ್ ಪಾವೂರು, ಇಸ್ಮಾಯಿಲ್ ಜಮಾಲ್, ಬೌತೀಶ್ ಡಿಸೋಜ, ಸಹಾಯಕ ವ್ಯವಸ್ಥಾಪಕ ರಜಿನ್, ಬ್ಯಾಂಕ್ ಸಿಬ್ಬಂದಿಗಳಾದ ಸೂರಜ್ ಕೆ.ವಿ., ವೀಣಾ ದಯಾನಂದ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿಕರು ಹಾಗೂ ಗ್ರಾಹಕರು ಭಾಗವಹಿಸಿ ಬ್ಯಾಂಕಿನ ಸೇವೆಯನ್ನು ಶ್ಲಾಘಿಸಿದರು. ಕೃಷಿಕರ ಅಭಿವೃದ್ಧಿಗೆ ಬ್ಯಾಂಕ್ ನೀಡುತ್ತಿರುವ ಕೊಡುಗೆಯನ್ನು ಗಣ್ಯರು ತಮ್ಮ ಭಾಷಣದಲ್ಲಿ ಪ್ರಶಂಸಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!