ಶಾರದಾ ಆರ್ಟ್ಸ್ ಕಲಾವಿದರು ಮತ್ತು ಐಸಿರಿ ಕಲಾವಿದರ ನೂತನ ತುಳು ನಾಟಕಗಳಿಗೆ ಶುಭ ಮುಹೂರ್ತ

ಮಂಜೇಶ್ವರ | ಜು. 9: ಶಾರದಾ ಆರ್ಟ್ಸ್ ಮಂಜೇಶ್ವರ ಹಾಗೂ ಐಸಿರಿ ಕಲಾವಿದರು ಮಂಜೇಶ್ವರ ತಂಡಗಳ 2026ನೇ ಸಾಲಿನ ನೂತನ ತುಳು ನಾಟಕಗಳಿಗೆ ಕಡಂಬಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶುಭ ಮುಹೂರ್ತ ನೆರವೇರಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಖ್ಯಾತ ನಾಯಕ ನಟ ಶನಿಲ್ ಗೌತಮ್ , ಹರಿನಾಥ ಬಂಡಾರಿ ಮುಳಿಂಜ , ದಿನಕರ್ ಹೊಸಂಗಡಿ , ಚಂದ್ರಹಾಸ್ ಮುಂದಂಗಾರು ಕಟ್ಟೆ , ಸಾತ್ವಿಕ್ ರೈ, ಸಾಮಿಲ್ ಬಂಗೇರ, ಪ್ರಜ್ಞೆಶ್ ಶೆಟ್ಟಿ, ಲಕ್ಷ್ಮಣ್ ಕುಂದರ್, ರವಿ ಕುಮಾರ್ ಬೋಳೂರು , ಅಶೋಕ್ ಬೇಕೂರು, ಪ್ರಭಾಕರ್ ಕೊಲ್ಯ, ಚಂದ್ರಶೇಖರ್ ಸಾಯ , ತಂಡದ ಮಾಲಕ ಕೃಷ್ಣ ಜಿ. ಮಂಜೇಶ್ವರ, ನಿರ್ದೇಶಕ ಜೆ.ಪಿ. ತೂಮಿನಾಡು ಹಾಗು ಶಾರದಾ , ಐಸಿರಿ ತಂಡದ ಸದಸ್ಯರು , ತಂಡದ ಪೋಷಕರು, ಹಿತೈಷಿಗಳು ಉಪಸ್ಥಿತರಿದ್ದು ನೂತನ ಎರಡು ನಾಟಕಗಳಿಗೆ ಶುಭ ಹಾರೈಸಿದರು.

ಗಡಿನಾಡ ಕಲಾನಿಧಿ ಕೃಷ್ಣ ಜಿ. ಮಂಜೇಶ್ವರ ಅವರ ಸಾರಥ್ಯದಲ್ಲಿ ಶಾರದಾ ಆರ್ಟ್ಸ್ ತಂಡ “ಎನ್ನ ಫ್ಯಾಮಿಲಿ” ಹಾಗೂ ಐಸಿರಿ ಕಲಾವಿದರು ತಂಡ “ಎನಡ ಗೊಬ್ಬೊಡ್ಚಿ” ನಾಟಕಗಳನ್ನು ರಂಗಕ್ಕೆ ತರುತ್ತಿದೆ.

“ಎನ್ನ ಫ್ಯಾಮಿಲಿ” ನಾಟಕವನ್ನು ಕಲಾ ತೇಜಸ್ವಿ ಜೆ.ಪಿ. ತೂಮಿನಾಡು ರಚಿಸಿ ನಿರ್ದೇಶಿಸುತ್ತಿದ್ದು, ಸಾಹಿತ್ಯವನ್ನು ತುಳುನಾಡ ಕಲಾ ಕದಿಕೆ ರಾಜೇಶ್ ಮುಗುಳಿ ರಚಿಸಿದ್ದಾರೆ. ಸಂಗೀತವನ್ನು ಗಣೇಶ್ ಕೊಡಕ್ಕಲ್ ನೀಡಲಿದ್ದು, ಪ್ರಕಾಶ್ ಕೆ. ತೂಮಿನಾಡು ಸಲಹೆ-ಸಹಕಾರ ಹಾಗೂ ಪ್ರಶಾಂತ್ ಅಂಚನ್ ಸಂಪೂರ್ಣ ಸಹಕಾರ ನೀಡಲಿದ್ದಾರೆ.

ಇನ್ನು “ಎನಡ ಗೊಬ್ಬೊಡ್ಚಿ” ನಾಟಕವನ್ನು ಕೃಷ್ಣ ಜಿ. ಮಂಜೇಶ್ವರ ರಚಿಸಿದ್ದು, ಕಲಾಮಾಣಿಕ್ಯ ವಿಕ್ರಂ ದೇವಾಡಿಗ ಚಿತ್ರಪುರ ನಿರ್ದೇಶನ ಮಾಡಲಿದ್ದಾರೆ. ಸಲಹೆ-ಸಹಕಾರವನ್ನು ಕಲಾ ತೇಜಸ್ವಿ ಜೆ.ಪಿ. ತೂಮಿನಾಡು ನೀಡಲಿದ್ದು, ಪ್ರವೀಣ್ ಕಣಿಯೂರು ಸಂಗೀತ ಸಂಯೋಜಿಸಲಿದ್ದಾರೆ. ತುಳುನಾಡ ರಂಗಭೂಷಣ ಪುಷ್ಪರಾಜ್ ಬೊಳ್ಳರ್ ಹಾಗೂ ತುಳುನಾಡ ರಂಗಬೊಳ್ಳಿ ರವಿರಾಮ ಕುಂಜ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ.

ಎರಡೂ ನಾಟಕಗಳು ಶೀಘ್ರದಲ್ಲೇ ತುಳು ರಂಗಭೂಮಿಯ ಪ್ರೇಕ್ಷಕರ ಮುಂದೆ ಬರಲಿದ್ದು, ಕಲಾಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿವೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!