ಕಾಸರಗೋಡು: ವಿದ್ಯುತ್ ತಂತಿ ದುರಸ್ತಿ ವೇಳೆ ಲೈನ್‌ಮ್ಯಾನ್ ವಿದ್ಯುತ್ ಸ್ಪರ್ಶಿಸಿ ಸಾವು

​ಕಾಸರಗೋಡು: ಮಡಿಕೈಯ ಕಣಚ್ಚಿರದಲ್ಲಿ ವಿದ್ಯುತ್ ತಂತಿ ದುರಸ್ತಿ ಮಾಡುವ ವೇಳೆ ವಿದ್ಯುತ್ ಸ್ಪರ್ಶಿಸಿ ಕೆಎಸ್‌ಇಬಿ ಲೈನ್‌ಮ್ಯಾನ್ ಮೃತಪಟ್ಟ ಘಟನೆ ಇಂದು (ಶುಕ್ರವಾರ) ಬೆಳಿಗ್ಗೆ ನಡೆದಿದೆ.


​ಮೃತಪಟ್ಟವರನ್ನು ಕೆಎಸ್‌ಇಬಿ ಮಾವುಂಗಾಲ್ ಸೆಕ್ಷನ್‌ನ ಲೈನ್‌ಮ್ಯಾನ್, ಪುಲ್ಲೂರು ಮಧುರಂಪಾಡಿಯ ಭರತನ್ (52) ಎಂದು ಗುರುತಿಸಲಾಗಿದೆ. ಬೆಳಿಗ್ಗೆ ಸುಮಾರು 10 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.


​ವಿದ್ಯುತ್ ಲೈನ್ ದುರಸ್ತಿ ಕಾರ್ಯಕ್ಕಾಗಿ ಕಂಬವೇರಿದ್ದ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶಿಸಿದೆ. ವಿದ್ಯುತ್ ತಂತಿಯಲ್ಲೇ ಸಿಲುಕಿದ್ದ ಮೃತದೇಹವನ್ನು ಬಳಿಕ ಸ್ಥಳಕ್ಕೆ ಆಗಮಿಸಿದ ಕಾಂಞಂಗಾಡ್ ಅಗ್ನಿಶಾಮಕ ದಳದ ಸಿಬ್ಬಂದಿ ಕೆಳಗಿಳಿಸಿದರು. ಮೃತದೇಹವನ್ನು ಕಾಂಞಂಗಾಡ್ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!