ಕಾಸರಗೋಡು: ಅಣಂಗೂರು ಶ್ರೀ ಶಾರದಾಂಭ ಭಜನಾ ಮಂದಿರದಲ್ಲಿ 2027ರ ಫೆಬ್ರವರಿಯಲ್ಲಿ ನಡೆಯಲಿರುವ ಶ್ರೀ ದೇವಿಯ ರಜತ ಫಲಕದ ಪುನರ್ ಪ್ರತಿಷ್ಠೆ ಹಾಗೂ ಶ್ರೀ ನಾಗನ ಕಟ್ಟೆಯ ಪುನರ್ ನಿರ್ಮಾಣ ಮತ್ತು ಪ್ರತಿಷ್ಠಾ ಮಹೋತ್ಸವದ ಧನಸಂಗ್ರಹಕ್ಕೆ ಚಾಲನೆ ನೀಡುವ ಉದ್ದೇಶದಿಂದ ‘ಶ್ರೀ ಶಾರದಾ ನಿಧಿ’ ಲಕ್ಕಿ ಕೂಪನ್ ಅನ್ನು ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಮಹೋತ್ಸವ ಸಮಿತಿಯ ರಕ್ಷಾಧಿಕಾರಿಯೂ ಆಗಿರುವ ಕೊಡುಗೈ ದಾನಿ ವಸಂತ ಪೈ ಬದಿಯಡ್ಕ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ವೇದಿಕೆಯಲ್ಲಿ ಡಾ. ವಾಮನ್ ರಾವ್ ಬೇಕಲ್ ಹಾಗೂ ಉದ್ಯಮಿ ರಾಮಚಂದ್ರ ಕಾಮತ್ ಉಪಸ್ಥಿತರಿದ್ದರು.

ಸಭೆಯ ಅಧ್ಯಕ್ಷತೆಯನ್ನು ಭಜನಾ ಮಂದಿರದ ಆಡಳಿತ ಸಮಿತಿಯ ಅಧ್ಯಕ್ಷ ದಿನೇಶ್ ವಹಿಸಿದ್ದರು.ಕಾರ್ಯಕ್ರಮದಲ್ಲಿ ವೆಂಕಟೇಶ್ ಸ್ವಾಗತಿಸಿದರು. ಸುನಿಲ್ ಶೆಟ್ಟಿ ವಂದಿಸಿದರು. ಕಿರಣ್ ಟಿ. ಕಾರ್ಯಕ್ರಮ ನಿರೂಪಿಸಿದರು.

2027ರಲ್ಲಿ ನಡೆಯಲಿರುವ ಮಹೋತ್ಸವದ ಸಿದ್ಧತೆಗಳಿಗೆ ಈ ಲಕ್ಕಿ ಕೂಪನ್ ಧನಸಂಗ್ರಹ ಅಭಿಯಾನ ಪ್ರಮುಖ ಹೆಜ್ಜೆಯಾಗಿದೆ ಎಂದು ಸಮಿತಿ ತಿಳಿಸಿದೆ.


