ಕಾಸರಗೋಡಿನಲ್ಲಿ ನವಜೀವನೋತ್ಸವ ಯಶಸ್ವಿ; ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಶೇಷ ಕಾರ್ಯಕ್ರಮ

ಕಾಸರಗೋಡು, ಜು. 20: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಬಿ.ಸಿ. ಟ್ರಸ್ಟ್) (ರಿ ) ಕಾಸರಗೋಡು ತಾಲೂಕಿನ ವತಿಯಿಂದ ಆಯೋಜಿಸಿದ್ದ ‘ನವಜೀವನೋತ್ಸವ’ ಕೆಸರಿನಲ್ಲಿ ಜಾನಪದ ಕ್ರೀಡೆ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಭಾನುವಾರ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾನ ಉಬ್ರ0ಗಳದಲ್ಲಿ ಯಶಸ್ವಿಯಾಗಿ ನಡೆಯಿತು.


ಗ್ರಾಮೀಣ ಕ್ರೀಡೆಗಳಾದ ಹಗ್ಗಜಗ್ಗಾಟ , ಮಡಕೆ ಹೊಡೆಯುವುದು , ಕೆಸರು ಗದ್ದೆ ಹಾಗು ಇನ್ನಿತ್ತರ ಮನೋರಂಜನೆ ಸ್ಪರ್ಧೆಗಳು ನಡೆದವು.ಮತ್ತು ನವಜೀವನ ಸಮಿತಿಯ ಸಾಧಕರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.


ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕೃಷ್ಣ ಶಿವಕೃಪ ಕುಂಜತ್ತೂರು ವಹಿಸಿದ್ದು, ಶ್ರೀ ವಿವೇಕ್ ವಿನ್ಸೆಂಟ್ ಪ್ಯಾಸ್ ದಿಕ್ಸೂಚಿ ಭಾಷಣ ಮಾಡಿದರು. ನವಜೀವನದ ಮಹತ್ವ, ಸಮಾಜಮುಖಿ ಚಟುವಟಿಕೆಗಳು ಹಾಗೂ ಸ್ವಸಹಾಯ ಸಂಘಗಳ ಪಾತ್ರದ ಕುರಿತು ಕಾರ್ಯಕ್ರಮದಲ್ಲಿ ಮಾಹಿತಿ ನೀಡಲಾಯಿತು.


ಕಾಸರಗೋಡು ಅಕಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್, ನವಜೀವನ ಸಮಿತಿ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಬದಿಯಡ್ಕ ವಲಯ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.


ನವಜೀವನೋತ್ಸವದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಸ್ಥಳೀಯರು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!