ಕಾಸರಗೋಡು: ಸಹಪಾಠಿ ಹಾಗೂ ಸಂಬಂಧಿಕರೊಂದಿಗೆ ಕಾಸರಗೋಡಿನ ಮೊಬೈಲ್ ಫೋನ್ ಅಂಗಡಿಗೆ ತೆರಳಿದ್ದ ಹತ್ತನೇ ತರಗತಿ ವಿದ್ಯಾರ್ಥಿಯೊಬ್ಬ ಕಾಣೆಯಾಗಿರುವುದಾಗಿ ದೂರು ದಾಖಲಾಗಿದೆ.ಬದಿಯಡ್ಕ ನೆಕ್ರಾಜೆ ನಿವಾಸಿಯಾದ 15 ವರ್ಷದ ಅಪ್ರಾಪ್ತ ಬಾಲಕನಾಗಿದ್ದಾನೆ ಕಾಣೆಯಾಗಿರುವುದು.

ಸೋಮವಾರ ಮಧ್ಯಾಹ್ನ 2:30 ರಿಂದ ಮಗನನ್ನು ಕಾಣೆಯಾಗಿರುವುದಾಗಿ ತಾಯಿ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಗನ ಸಹಪಾಠಿ ಹಾಗೂ ಅವರ ಸಂಬಂಧಿಕರೊಂದಿಗೆ ಕಾಸರಗೋಡಿನ ಮೊಬೈಲ್ ಅಂಗಡಿಗೆ ತೆರಳಿದ್ದನೆಂದೂ, ಬಳಿಕ ವಾಪಸ್ ಬಂದಿಲ್ಲವೆಂದೂ ದೂರಿನಲ್ಲಿ ತಿಳಿಸಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

