ಮಂಗಲ್ಪಾಡಿ : ಕಾಸರಗೋಡು ಜಿಲ್ಲಾ ಕುಲಾಲ ಸಂಘ (ರಿ.) ಮಂಗಲ್ಪಾಡಿ ಶಾಖೆಯಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮವು ದಿನಾಂಕ 09/08/2026ನೇ ಆದಿತ್ಯವಾರ ಶಾಖೆಯ ಕಾರ್ಯದರ್ಶಿಯಾಗಿರುವ ರವಿ ಕುಲಾಲ್ ಬೊಳ್ಳಾರು ಇವರ ಮನೆಯಲ್ಲಿ ಜರಗಿತು.ಮೊದಲಿಗೆ ಮಕ್ಕಳಿಂದ ಪ್ರಾರ್ಥನೆಯೊಂದಿಗೆ ಆರಂಭವಾಯಿತು.ವನಿತ ರಾಜೇಶ್ ಕೊಂಡೆವೂರು ಸ್ವಾಗತಿಸಿದರು.


ಮಂಗಲ್ಪಾಡಿ ಶಾಖೆಯ ಗೌರವ ಸಲಹೆಗಾರರಾದ ಸೇಸಪ್ಪ ಮೂಲ್ಯ ಬೊಳ್ಳಾರು ಹಾಗೂ ಶಾಖೆಯ ಗೌರವಾಧ್ಯಕ್ಷರಾದ ವಾಸು ಕುಲಾಲ್ ಬೊಳ್ಳಾರು ಇವರ ದಿವ್ಯ ಹಸ್ತದಿಂದ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.ಹಿಂದಿನ ಕಾಲದಲ್ಲಿ ಆಟಿ ತಿಂಗಳಲ್ಲಿನ ಕೃಷಿ ಪದ್ಧತಿ,ತಿಂಡಿ ತಿನಿಸುಗಳು,ಅನುಭವಿಸಿದ ಕಷ್ಟಗಳು,ಆಟಿ ತಿಂಗಳಿನಲ್ಲಿ ನಡೆಯುವ ಆಚರಣೆಗಳು ಹಾಗೂ ಅಧುನಿಕ ಕಾಲದಲ್ಲಿ ಆದ ಬದಲಾವಣೆಗಳ ಕುರಿತು ಬಾಲಕೃಷ್ಣ ಪಯ್ಯಾರ್ ಅವರು ಸುಂದರವಾಗಿ ವರ್ಣಿಸಿದರು.ಗೌರವ ಸಲಹೆಗಾರರಾದ ಸೇಸಪ್ಪ ಮೂಲ್ಯ ಬೊಳ್ಳಾರು ಹಾಗೂ ಗೌರವಾಧ್ಯಕ್ಷರಾದ ವಾಸು ಕುಲಾಲ್ ಬೊಳ್ಳಾರು ಅವರ ಅನುಭವನ್ನು ಹಂಚಿಕೊಂಡರು.ನಮ್ಮ ಶಾಖೆಯ ಹಿರಿಯರಾದ ಕಮಲ ಪಯ್ಯಾರ್ ಅವರು ಹಿಂದಿನ ಕಾಲದಲ್ಲಿ ನೇಜಿ ನೆಡುವಾಗ ಹಾಡುವ ಪಾದ್ದನ ಹಾಡನ್ನು ಹಾಡಿ ದರು.ನಂತರ ಶ್ರೀಮತಿ ಸುಮತಿ ಬೇಕೂರು ವಂದನಾರ್ಪಣೆಗೈದರು.


ಎನ್.ಕೆ.ಕುಲಾಲ್ ಬೇಕೂರು ಕಾರ್ಯಕ್ರಮ ವನ್ನು ನಿರೂಪಿಸಿದರು .ಹಾಗೂ ಕುಲಾಲ ಬಾಂಧವರೆಲ್ಲರೂ ಭಾಗವಹಿಸಿದರು.ಸಭಾಕಾರ್ಯಕ್ರಮದ ನಂತರ ಶಾಖೆಯ ಸದಸ್ಯರು ತಯಾರು ಮಾಡಿದ ವಿವಿಧ ರೀತಿಯ ಆಟಿದ ತಿನಸ್ ಪ್ರದರ್ಶನ ಮತ್ತು ಮಹತ್ವದ ಕುರಿತು ಮಾಹಿತಿ ನೀಡಲಾಯಿತು.ಪ್ರದರ್ಶನದಲ್ಲಿ, ಉಪ್ಪಿನಕಾಯಿ ,ಪಾನಕ,ಅಕ್ಕಿ ಉಂಡೆ,ಕುಡುತ ಚಟ್ನಿ,ಪತ್ರೊಡೆ,ಅನ್ನ,ಸಾಂಬಾರ್, ಮಂಜಲ್ ಇರೆತ ಗಟ್ಟಿ,ಪಾಯಸ,ಕಂಚಲ ಪಲ್ಯ,ಪುಂಡಿ ಗಸಿ,ಹಲಸಿನ ಉಪ್ಪಡ್ ಪಚಿಲ್ ಕಡ್ಲೆ, ಮೆತ್ತೆ ಗಂಜಿ,ಬೆಳ್ಳುಳ್ಳಿ ಚಟ್ನಿ,ಇಟ್ಟಿ ಚಟ್ನಿ,ತಿಮರೆ ಚಟ್ನಿ,ಇಡ್ಲಿ,ಕೂಂಬೆ ಪಲ್ಯ, ಪುದೀನ ಚಟ್ನಿ, ಹಲಸಿನ ಹಪ್ಪಳ,ಊರ ಕೋಳಿ ಸುಕ್ಕ ಮುಂತಾದ ಹಲವು ತರದ ಆಟಿಯ ತಿನಿಸನ್ನು ವಿತರಿಸಲಾಯಿತು. ನಮ್ಮ ಸಂಸ್ಕೃತಿ ಸಂಸ್ಕಾರದ ವಿಚಾರದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲಾಯಿತು.



