ತೃಕರಿಪುರ ರೈಲು ನಿಲ್ದಾಣದಲ್ಲಿ ಬೈಕ್ ಕಳವು: ಮೂವರು ಬಂಧನ

ಕಾಸರಗೋಡು : ತೃಕರಿಪುರ ರೈಲು ನಿಲ್ದಾಣದಲ್ಲಿ ಪಾರ್ಕ್ ಮಾಡಿದ್ದ ಶಿಕ್ಷಕ ಪಿ.ವಿ. ಪ್ರಶೋಬ್ ಅವರ ಬೈಕ್ ಕದ್ದು, ಅನ್ನೂರಿನ ಗುಜರಿ ಅಂಗಡಿಗೆ ಮಾರಾಟ ಮಾಡಿದ್ದ ಮೂವರು ಕಿಲಾಡಿಗಳನ್ನು ಚಂದೇರ ಪೊಲೀಸರು ಬಂಧಿಸಿದ್ದಾರೆ.

ಶರ್ಬಾ ಸುಬೈರ್ (22), ಮುಹಮ್ಮದ್ ಸಾಬೀತ್ ( 21) ಹಾಗೂ ಮುಹಮ್ಮದ್ ಫವಾಸ್ (21) ಬಂಧಿತ ಆರೋಪಿಗಳು.
​ಕಳೆದ ಸೋಮವಾರ ಬೆಳಿಗ್ಗೆ ನಿಲ್ಲಿಸಿದ್ದ ಬೈಕ್ ರಾತ್ರಿ ಹೊತ್ತಿಗೆ ನಾಪತ್ತೆಯಾದಾಗ ಶಿಕ್ಷಕರು ದೂರು ನೀಡಿದ್ದರು. ಪ್ರಕರಣ ಕೈಗೆತ್ತಿಕೊಂಡ ಎಸ್‌ಐ ವಿಷ್ಣು ಎಸ್. ನಾಯರ್ ನೇತೃತ್ವದ ಪೊಲೀಸ್ ಪಡೆ, ರೈಲು ನಿಲ್ದಾಣದ ಕಾವಲು ಪಡೆ ಅಳವಡಿಸಿದ್ದ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಮಟ್ಟಹಾಕಿದೆ.


ಕಳುವಾದ ದ್ವಿಚಕ್ರ ವಾಹನವನ್ನು ಗುಜರಿ ಅಂಗಡಿಯಿಂದ ಜಪ್ತಿ ಮಾಡಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!