ಕಾಸರಗೋಡು: ನಾಪತ್ತೆಯಾಗಿದ್ದ 25ರ ಯುವಕ ತೋಟದ ಕೆರೆಯಲ್ಲಿ ಶವವಾಗಿ ಪತ್ತೆ

​ಕಾಸರಗೋಡು: ಕೂಡ್ಲು ಆರ್.ಡಿ.ನಗರದ ಬಳಿ ಕೆಲಸಕ್ಕೆ ತೆರಳಿದ್ದ ಯುವಕನೊಬ್ಬ ನಾಪತ್ತೆಯಾಗಿ, ಬಳಿಕ ಖಾಸಗಿ ತೋಟದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

​ಕೂಡ್ಲು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬಳಿಯ ನಿವಾಸಿ ವಿನಾಯಕ ಕೆ. (25) ಸಾವನ್ನಪ್ಪಿದ ದುರ್ದೈವಿ.

ರವಿವಾರ ಕೆಲಸಕ್ಕೆಂದು ಹೋದವರು ವಾಪಸ್ ಬಾರದ ಕಾರಣ ಮನೆಯವರು ಕಾಸರಗೋಡು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
​ನಂತರ ತೋಟದ ಕೆರೆ ಬಳಿ ಆತನ ಮೊಬೈಲ್ ಮತ್ತು ಚಪ್ಪಲಿ ಪತ್ತೆಯಾಗಿದ್ದು, ಅಗ್ನಿಶಾಮಕ ದಳವು ಮಂಗಳವಾರ ಬೆಳಿಗ್ಗೆ ನಡೆಸಿದ ಶೋಧನೆಯಲ್ಲಿ ಶವ ಹೊರತೆಗೆಯಲಾಗಿದೆ.
ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!