ಕಾಸರಗೋಡು: ಡಾ. ವಾಣಿಶ್ರೀ ಕಾಸರಗೋಡು ಸಾರಥ್ಯದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ) ಕಾಸರಗೋಡು ಇವರಿಂದ ಸಂಘದ 240ನೇ ಕಾರ್ಯಕ್ರಮವಾಗಿ ಆಗಸ್ಟ್ 12 ಆಟಿ ಅಮಾವಾಸ್ಯೆ ದಿನದಂದು ಪ್ರಕೃತಿ ಆಯುರ್ವೇದ ಚಿಕಿತ್ಸಾಲಯ ಇಲ್ಲಿ ಸಾರ್ವಜನಿಕವಾಗಿ ಹಾಲೆ ಮರದ ಕೆತ್ತೆ ಕಷಾಯವನ್ನು ವಿತರಿಸಲಾಯಿತು. ಹತ್ತಿರದ ಊರುಗಳಿಂದ ಬಹಳಷ್ಟು ಜನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕೆತ್ತೆ ಕಷಾಯವನ್ನು ಕುಡಿದು ತುಳುನಾಡು ಸಂಸ್ಕೃತಿಯನ್ನು ಸಂಭ್ರಮಿಸಿದರು. ಆಟಿ ಅಮಾವಾಸ್ಯೆ ದಿನದಂದು ಈ ಹಾಲೆ ಮರದ ತೊಗಟೆಯು ಅನೇಕ ಔಷಧೀಯ ಗುಣಗಳನ್ನು ಹೊಂದಿರುತ್ತದೆ.

ಪ್ರಾಚೀನ ಕಾಲದಲ್ಲಿ ಜನರು ತಮಗೆ ರೋಗ ರುಜಿನಗಳು ಬರದಂತೆ ಮುಂಜಾಗ್ರತಾ ಕ್ರಮವಾಗಿ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಮೃತ ಸಮಾನ ಈ ಕಷಾಯವನ್ನು ಕುಡಿಯುತ್ತಿದ್ದರು ಎಂದು ಸಂಘದ ಅಧ್ಯಕ್ಷರಾದ ಡಾ ವಾಣಿಶ್ರೀ ಕಾಸರಗೋಡು ಅಭಿಪ್ರಾಯಪಟ್ಟರು. ಆಯುರ್ವೇದ ವೈದ್ಯರಾದ ಡಾ. ಶ್ರೀನಿಧಿ ಸರಳಾಯ ತಾವೇ ಸ್ವತಃ ಕೆತ್ತೆಗಳನ್ನು ತಂದು ಕಷಾಯ ತಯಾರಿಸಿ ನೀಡಿದ್ದರು. ಸಂಘದ ಕಾರ್ಯದರ್ಶಿ ಶ್ರೀ ಸುರೇಶ್ ಉಡುಪಿ ಕಾರ್ಯಕ್ರಮ ಸಂಯೋಜಿಸಿದರು. ಉಪಾಧ್ಯಕ್ಷರಾದ ಶ್ರೀ ಅಚ್ಚುತ ಭಟ್ ಸಹಕರಿಸಿದರು. ಕೋಶಾಧಿಕಾರಿ ಡಾ ವೆಂಕಟಗಿರೀಶ್ ಕಾರ್ಯಕ್ರಮದ ಆರ್ಥಿಕ ನಿರ್ವಹಣೆ ಮಾಡಿದರು.

ಕಲಾವಿದರಾದ ಶ್ರೀರೇಖಾ ಶ್ರೇಯಸ್ ಚಂದ್ರಾವತಿ ಮಹಾಲಿಂಗ ಮಂಜುನಾಥ್ ಮುoತಾದವರಿಗೆ ಆಟಿ ತಿಂಡಿಯನ್ನು ನೀಡಿ ತುಳು ನಾಡಿನ ಸಂಪ್ರದಾಯವನ್ನು ವೈಭವದಿಂದ ಆಚರಿಸಲಾಯಿತು.

