ಕಾಸರಗೋಡಿನಲ್ಲಿ ರಾಮಾಯಣ ಸತ್ಸಂಗ

ಕಾಸರಗೋಡು: ವಿಶ್ವ ಹಿಂದೂ ಪರಿಷತ್ ಕಾಸರಗೋಡು ಪ್ರಖಂಡ ನೇತೃತ್ವದಲ್ಲಿ ರಾಮಾಯಣ ಸತ್ಸಂಗ ಕಾರ್ಯಕ್ರಮ ಕಾಸರಗೋಡು ಹೃದಯ ಭಾಗದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಜರಗಿತು. 3 ನೇ ದಿನದ ಕಾರ್ಯಕ್ರಮ ಹಿರಿಯ ವೈದ್ಯರು ಹಾಗೂ ಯಕ್ಷಗಾನ ಅರ್ಥದಾರಿಯಾದ ಡಾl ಕೆ.ಎನ್.ಬಲ್ಲಾಳ್ ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಶ್ರೀ ಲಕ್ಷ್ಮಣೋಜಿ ರಾವ್ ಬಹುಮಾನ್ ಪಿಲಿಕುಂಜೆ, ವಿಎಚ್ ಪಿ ಕಾಸರಗೋಡು ಪ್ರಖಂಡ ಗೌರವಾಧ್ಯಕ್ಷ ಡಾ| ಕೆ.ಎನ್.ವೆಂಕಟ್ರಮಣ ಹೊಳ್ಳ, ವಿಎಚ್‌ಪಿ ಹಿರಿಯ ಕಾರ್ಯಕರ್ತ ಎ.ಟಿ.ನಾಯಕ್, ಉಪಾಧ್ಯಕ್ಷ ಗುಣಪಾಲ ಅಮೈ, ಕಾರ್ಯದರ್ಶಿ ಕಿಶೋರ್ ಎಸ್.ವಿ.ಟಿ, ಲಕ್ಷ್ಮೀಕಾಂತ ನೆಲ್ಲಿಕುಂಜೆ ಉಪಸ್ಥಿತರಿದ್ದರು. ವಿಎಚ್ ಪಿ ಪ್ರಖಂಡ ಅಧ್ಯಕ್ಷ ಗುರುಪ್ರಸಾದ್ ಕೋಟೆಕಣಿ ಸ್ವಾಗತಿಸಿ ಕೆ.ಎನ್. ರಾಮಕೃಷ್ಣ ಹೊಳ್ಳ ಧನ್ಯವಾದ ನೀಡಿ ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರ (ರಿ) ರಜತರಂಗ ಇವರಿಂದ ವಿಶೇಷ ತಾಳಮದ್ದಳೆ ಪಾದುಕ ಪ್ರದಾನ ಪ್ರಸಂಗ ನಡೆಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!