AKPA ವೆಸ್ಟ್ ಯೂನಿಟ್ ನೇತೃತ್ವದಲ್ಲಿ ಆಗಸ್ಟ್ 19 ವಿಶ್ವ ಛಾಯಾಗ್ರಹಣ ದಿನಾಚರಣೆ

ಕಾಸರಗೋಡು: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಷನ್ (AKPA) ವೆಸ್ಟ್ ಯೂನಿಟ್ ನೇತೃತ್ವದಲ್ಲಿ ಆಗಸ್ಟ್ 19 ರಂದು ವಿಶ್ವ ಛಾಯಾಗ್ರಹಣ ದಿನವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಧ್ಯಕ್ಷ ವಸಂತ್ ಕೆರೆಮನೆ ವಹಿಸಿದ್ದರು.

ಈ ಸಂದರ್ಭದಲ್ಲಿ, 15ನೇ DJ ಮೆಮೋರಿಯಲ್ ಫೋಟೋಗ್ರಫಿ ಅವಾರ್ಡ್-2026 ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ನಮ್ಮ ನಾಡಿಗೆ ದೊಡ್ಡ ಕೀರ್ತಿ ತಂದ ದಿನೇಶ್ ಇನ್ಸೈಟ್ (Dinesh Insight) ಅವರನ್ನು ಸನ್ಮಾನಿಸಲಾಯಿತು. ಅವರ ಈ ಅದ್ಭುತ ಸಾಧನೆ ನಮ್ಮ ಎಲ್ಲಾ ಛಾಯಾಗ್ರಾಹಕರಿಗೆ ದೊಡ್ಡ ಪ್ರೇರಣೆಯಾಗಿದೆ ನಿಮಿಷಗಳನ್ನು ಸ್ಥಿರಗೊಳಿಸಿ ಇತಿಹಾಸ ಮತ್ತು ನೆನಪುಗಳನ್ನಾಗಿ ಪರಿವರ್ತಿಸುವ ಮಹಾನ್ ಕಲೆಯೇ ಛಾಯಾಗ್ರಹಣ ಎಂದು ಕಾರ್ಯದರ್ಶಿ ಶಾಲಿನಿ ರಾಜೇಂದ್ರನ್ ಸ್ವಾಗತ ಭಾಷಣದಲ್ಲಿ ಹೇಳಿದರು.

ಪ್ರಶಸ್ತಿ ವಿಜೇತರನ್ನು ಹಿರಿಯ ಛಾಯಾಗ್ರಾಹಕರಾದ ಮೈಂದಪ್ಪ ಅವರು ಶಾಲು ಹೊದಿಸಿ, ಶ್ರೀ ಜಯಪ್ರಕಾಶ್ ಪ್ರಕಾಶ್ ಸ್ಟುಡಿಯೋ, ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಗೌರವ ಸ್ವೀಕರಿಸಿದ ಅವರು ಛಾಯಾಗ್ರಹಣಕ್ಕೆ ಬಂದ ದಾರಿ ಹಾಗೂ ಹಲವು ಅನುಭವದ ನುಡಿಗಳನ್ನಾಡಿ ವೆಸ್ಟ್ ಯೂನಿಟ್ ಸನ್ಮಾನಿಸಿದ ಸಂತೋಷವನ್ನು ವ್ಯಕ್ತಪಡಿಸಿದರು. ಯೂನಿಟ್ ನಿರೀಕ್ಷಕ ಅಜಿತ್ ಶುಭ ಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಎಕೆಪಿಎ ವಲಯ ಉಪಾಧ್ಯಕ್ಷ ಸುಬ್ರಹ್ಮಣ್ಯ ವಿಡಿಯೋನಿಕ್ಸ್, ಸಿಗ್ನೇಚರ್, ಯುನಿಟ್ ಪಿ.ಆರ್.ಓ ವಿನೋದ್ ಕಲ್ಲಂಗೈ, ಯುನಿಟ್ ಸದಸ್ಯ ರತೀಶ್ ರಾಮು ಉಪಸ್ಥಿತರಿದ್ದರು. ವಲಯ ಜತೆ ಕಾರ್ಯದರ್ಶಿ ಗಣೇಶ್ ರೈ ಧನ್ಯವಾದ ನೀಡಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!