ಮೀಯಪದವು: ಕ್ಷೇಮ ಪಿಂಚಣಿ ಪದ್ಧತಿಯನ್ನು ಬುಡಮೇಲುಗೊಳಿಸುವ ಕೇರಳದ ಯುಡಿಎಫ್ ಸರ್ಕಾರದ ತೀರ್ಮಾನವನ್ನು ವಿರೋಧಿಸಿ, ಸಿಪಿಐಎಂ ರಾಜ್ಯ ಸಮಿತಿಯ ಆಹ್ವಾನದ ಮೇರೆಗೆ ಮೀಯಪದವಿನ ಮೀಂಜ ಗ್ರಾಮ ಕಚೇರಿ ಮುಂದೆ ಪಿಂಚಣಿದಾರರ ಸತ್ಯಾಗ್ರಹ ನಡೆಯಿತು.


ಸಿಪಿಐಎಂ ಮಂಜೇಶ್ವರ ಏರಿಯಾ ಕಾರ್ಯದರ್ಶಿ ಸಿ.ಜಿ. ಮ್ಯಾಥ್ಯು ಸತ್ಯಾಗ್ರಹವನ್ನು ಉದ್ಘಾಟಿಸಿದರು. ಲೋಕೇಶ್ ಚಿನಾಲ ಅಧ್ಯಕ್ಷತೆ ವಹಿಸಿದ್ದರು. ರಾಮಚಂದ್ರ ಟಿ. ಸ್ವಾಗತಿಸಿದರು.


ಬಾಳಪ್ಪ ಬಂಗೇರ, ಜನಾರ್ದನ ಪೂಜಾರಿ ಹಾಗೂ ಐರಿನ್ ಜೋಸ್ಫಿನ್ ನೇತೃತ್ವದಲ್ಲಿ ಸತ್ಯಾಗ್ರಹ ನಡೆಯಿತು.

