ಮಂಜೇಶ್ವರ: ಬಂದ್ಯೋಡ್ ಅಡ್ಕದಲ್ಲಿ ಮದ್ರಸಾಗೆ ನಡೆದುಕೊಂಡು ಹೋಗುತ್ತಿದ್ದ ಎಂಟು ವರ್ಷದ ಬಾಲಕನಿಗೆ ಬೀದಿ ನಾಯಿಗಳು ಅಟ್ಯಾಕ್ ಮಾಡಲು ಯತ್ನಿಸಿರುವ ಘಟನೆ ನಡೆದಿದೆ.
ಗುರುವಾರ ಬೆಳಿಗ್ಗೆ 8:30ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಸೈನು ಎಂಬುವವರ ಪುತ್ರ ಸಯಾನ್ ಎಂಬ ಬಾಲಕನು ನಾಯಿಗಳ ಗುಂಪಿನ ದಾಳಿಯಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾನೆ.

ಮದ್ರಸಾಗೆ ತೆರಳುತ್ತಿದ್ದ ಸಯಾನ್ ಹಿಂದೆ ಬಿದ್ದ ನಾಯಿಗಳ ಗುಂಪು ಬೆನ್ನಟ್ಟಿ ದಾಳಿ ನಡೆಸಲು ಯತ್ನಿಸಿದೆ.ಹೆದರಿ ಓಡುವಾಗ ಬಾಲಕ ಕೆಳಗೆ ಬಿದ್ದು ಗಾಯಗೊಂಡಿದ್ದಾನೆ. ಈ ವಾರದಲ್ಲಿ ಸಯಾನ್ ಮೇಲೆ ಬೀದಿ ನಾಯಿಗಳು ದಾಳಿಗೆ ಯತ್ನಿಸುತ್ತಿರುವ ಎರಡನೇ ಘಟನೆ ಇದಾಗಿದೆ.
ಗಾಯಗೊಂಡ ಬಾಲಕನನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ.ಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು, ಅಧಿಕಾರಿಗಳು ಕೂಡಲೇ ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಬಾಲಕನನ್ನು ನಾಯಿಗಳು ಬೆನ್ನಟ್ಟುವ ಮತ್ತು ಬಾಲಕ ಭಯದಿಂದ ಓಡುವ ದೃಶ್ಯಗಳು ಹತ್ತಿರದ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆ ದೃಶ್ಯಗಳು ಈಗ ಹೊರಬಂದಿವೆ.


