ದೇವಸ್ಥಾನದಲ್ಲಿ ಕಳವು ಯತ್ನ: ಕುಖ್ಯಾತ ಕಳ್ಳ ರೆಡ್ ಹ್ಯಾಂಡ್ ಆಗಿ ಸೆರೆ

ಕಾಸರಗೋಡು : ಇಲ್ಲಿಯ ಅಲಾಮಿಪಲ್ಲಿ ಪೆಟ್ರೋಲ್ ಪಂಪ್ ಹತ್ತಿರವಿರುವ ರಾಜರಾಜೇಶ್ವರಿ ಮೂಕಾಂಬಿಕಾ ದೇವಸ್ಥಾನದಲ್ಲಿ ಕಳವು ನಡೆಸಲು ಯತ್ನಿಸಿದ ಕುಖ್ಯಾತ ಕಳ್ಳನನ್ನು ಸ್ಥಳೀಯರು ರೆಡ್ ಹ್ಯಾಂಡ್‌ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.ಬುಧವಾರ ಮುಂಜಾನೆ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
​ಬಳಾಲ್ ನಿವಾಸಿ ಹರೀಶ್ ಕುಮಾರ್ (53) ಬಂಧಿತ ಆರೋಪಿ.

ದೇವಸ್ಥಾನದ ಸಮೀಪದ ಮನೆಯಿಂದ ಕೊಡಲಿ ತೆಗೆದುಕೊಂಡು ಬಂದು ಶ್ರೀಕೋವಿಡ್ ಬೀಗ ಮುರಿಯಲು ಯತ್ನಿಸುತ್ತಿದ್ದಾಗ, ಅನುಮಾನಗೊಂಡು ಗಮನಿಸುತ್ತಿದ್ದ ಸ್ಥಳೀಯರು ಆತನನ್ನು ಹಿಡಿದು ಮೊಬೈಲ್‌ನಲ್ಲಿ ದೃಶ್ಯ ಸೆರೆಹಿಡಿದಿದ್ದಾರೆ.

​ಮನೆ ಮಾಲೀಕ ಕೆ.ವಿ. ಪ್ರಶೋಭ್ ಕುಮಾರ್ ನೀಡಿದ ದೂರಿನ ಮೇರೆಗೆ ಹೋಸ್‌ದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳೆದ ನವೆಂಬರ್‌ನಲ್ಲಿ ರಾಜೇಶ್ವರಿ ಮಠದಲ್ಲಿ ನಡೆದ ದರೋಡೆ ಸೇರಿದಂತೆ ಕಾಸರಗೋಡು ಹಾಗೂ ಕಣ್ಣೂರು ಜಿಲ್ಲೆಗಳ ಹಲವು ದೇವಾಲಯಗಳ ಕಳವು ಪ್ರಕರಣಗಳಲ್ಲಿ ಈತ ಪ್ರಮುಖ ಆರೋಪಿಯಾಗಿದ್ದಾನೆನ್ನಲಾಗಿದೆ.

SHARE
Loading spinner

One thought on “ದೇವಸ್ಥಾನದಲ್ಲಿ ಕಳವು ಯತ್ನ: ಕುಖ್ಯಾತ ಕಳ್ಳ ರೆಡ್ ಹ್ಯಾಂಡ್ ಆಗಿ ಸೆರೆ

Leave a Reply

Your email address will not be published. Required fields are marked *

error: Content is protected !!