ಕಾಸರಗೋಡು: ಅಡಿಕೆ ಹೆಕ್ಕಲು ತೋಟಕ್ಕೆ ತೆರಳಿ ನಾಪತ್ತೆಯಾಗಿದ್ದ ವೃದ್ಧೆಯೊಬ್ಬರ ಶವ ಸಮೀಪದ ತೋಡಿನಲ್ಲಿ ಪತ್ತೆಯಾಗಿದೆ.ಮಲ್ಲಂಪಾರೆ ತಿಮ್ಮನಗುಂಡಿಯ ದಿವಂಗತ ಚೋಮಣ್ಣ ನಾಯ್ಕರ ಪತ್ನಿ ಗುಲಾಬಿ (68) ಸಾವನ್ನಪ್ಪಿದ ದುರ್ದೈವಿ.

ತೋಟಕ್ಕೆ ಹೋದವರು ವಾಪಸ್ ಬಾರದಿದ್ದದರಿಂದ ಮನೆಯವರು ಹುಡುಕಾಟ ನಡೆಸಿದಾಗ, ತೋಡಿನ ಬದಿಯಲ್ಲಿ ಅವರ ಚಪ್ಪಲಿ ಪತ್ತೆಯಾಗಿತ್ತು. ಕೂಡಲೇ ಅಗ್ನಿಶಾಮಕ ದಳ ಹಾಗೂ ಸ್ಥಳೀಯ ನಾಗರಿಕರು ಜಂಟಿ ಶೋಧ ಕಾರ್ಯ ಆರಂಭಿಸಿದ್ದರು.ಕೈಕಾಲು ತೊಳೆಯಲು ತೋಡಿಗೆ ಇಳಿದಾಗ ಆಯತಪ್ಪಿ ನೀರಿನಲ್ಲಿ ಕೊಚ್ಚಿಹೋಗಿ ಸಾವು ಸಂಭವಿಸಿರಬಹುದೆಂದು ಶಂಕಿಸಲಾಗಿದೆ.

ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಪೂರ್ಣಗೊಳಿಸಿ ಮೃತದೇಹವನ್ನು ಕುಟುಂಬಸ್ಥರಿಗೆ ಬಿಟ್ಟು ಕೊಡಲಾಯಿತು.


Honestly the best gaming experience I have had in a while. The bonuses are generous and the customer support team is actually helpful. Highly recommended for all players. Visit 88korwin