ಕಾಸರಗೋಡು: ಚಿರಪುರಂ ಆಲಿನ್ ಕೀಳಿಲ್‌ನಲ್ಲಿ ನಿಲ್ಲಿಸಿದ್ದ ಲಾರಿಯೊಂದು ಬೆಂಕಿಗಾಹುತಿಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಚಿರಪುರಂ ಮಣ್ಣಾರತ್ ಹೌಸ್‌ನ ಜೋಷಿ ಥೋಮಸ್ ಎಂಬವರಿಗೆ ಸೇರಿದ ಲಾರಿ ನಿನ್ನೆ ಬೆಂಕಿಗಾಹುತಿಯಾಗಿದೆ.

ಲಾರಿಯ ಕ್ಯಾಬಿನ್ ಮತ್ತು ಇಂಜಿನ್ ಸೇರಿದಂತೆ ಹೆಚ್ಚಿನ ಭಾಗಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ. ಲಾರಿಯ ಸಮೀಪದಲ್ಲೇ ಇತರೆ ಲಾರಿಗಳನ್ನು ನಿಲ್ಲಿಸಲಾಗಿದ್ದರೂ, ಅಗ್ನಿಶಾಮಕ ದಳವು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ.

ಘಟನೆಯಿಂದ ನಾಲ್ಕು ಲಕ್ಷ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಮಾಲಕರು ತಿಳಿಸಿದ್ದಾರೆ. ಈ ಕುರಿತು ಲಾರಿಯ ಮಾಲಕ ನೀಡಿರುವ ದೂರಿನ ಮೇರೆಗೆ ನೀಲೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.



I’ve been trying out different sites lately and this one really stands out for its smooth interface. Definitely worth a visit if you want a hassle-free experience. Check out bdjoya9bdt