ಕುಂಬಳೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ

ಕುಂಬಳೆ: ಮೊರ ಶ್ರೀ ಐವರ್ ಭಗವತಿ ಸಂಘ, ಶ್ರೀ ಭುವನ ಮಾಳಿಂಗರೆ ಇಲ್ಲಿ 172ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮ ನಡೆಯಿತು.

ತೀಯಾ ವೆಲ್ಫೇರ್ ಅಸೋಸಿಯೇಷನ್ ಕಾಸರಗೋಡು ಜಿಲ್ಲಾ ಅಧ್ಯಕ್ಷ ಗಣೇಶ್ ಪಾವೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಾಗೇಶ್ ಕುಂಬುಳೆ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸುಧಾಕರ ಕುಂಬುಳೆ, ಮಾಧವ ಕುಂಬಳೆ, ಸಾವಿತ್ರಿ ಪೆರ್ವಾಡ್, ಜಯಂತಿ ಪೆರ್ವಾಡ್, ಭಾರತಿ ಪೆರ್ವಾಡ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಕುಂಬಳೆ ಮಾಳಿಂಗರೆ ಎಸ್.ಎನ್.ಡಿ.ಪಿ. ಹಾಗೂ ಶ್ರೀ ಗುರು ಅನುಗ್ರಹ ವನಿತಾ ಸ್ವಸಹಾಯ ಸಂಘದ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.ಕುಸುಮ ಸ್ವಾಗತಿಸಿದರು. ಸುಧಾಕರ ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!