ಕಾಸರಗೋಡು: ಪೆರಿಯ ಮೂನಾಂಕಡವ್‌ನ ಅಪಾಯಕಾರಿ ಏರು ರಸ್ತೆಯಲ್ಲಿ ಮಂಗಳವಾರ ಮತ್ತೊಂದು ಅಪಘಾತ ಸಂಭವಿಸಿದೆ. ಸುಳ್ಯದಿಂದ ಕಾಞಂಗಾಡ್‌ಗೆ ತರಕಾರಿ ಒಯ್ಯುತ್ತಿದ್ದ ಪಿಕಪ್ ವಾಹನವು ಚಾಲಕನ ನಿಯಂತ್ರಣ ತಪ್ಪಿ ಹಿಮ್ಮುಖವಾಗಿ ಚಲಿಸಿ ಚರಂಡಿಗೆ ಬಿದ್ದಿದೆ.

ಪಿಕಪ್‌ನ ಚಕ್ರ ಚರಂಡಿಯಲ್ಲಿ ಸಿಲುಕಿದ್ದರಿಂದ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ಏರು ರಸ್ತೆಯು ನಿರಂತರ ಅಪಘಾತ ವಲಯವಾಗಿದ್ದು, ಈವರೆಗೆ ೭ ಮಂದಿ ಜೀವ ಕಳೆದುಕೊಂಡಿದ್ದಾರೆ. ಕಳೆದ ಮಾರ್ಚ್ 23ರಂದು ಸರಕು ಲಾರಿಯೊಂದು ಮಗುಚಿ ಬಿದ್ದಿತ್ತು. ರಸ್ತೆಯ ಅವೈಜ್ಞಾನಿಕ ನಿರ್ಮಾಣವೇ ಈ ಸರಣಿ ಅಪಘಾತಗಳಿಗೆ ಮುಖ್ಯ ಕಾರಣ ಎಂದು ಆರೋಪಿಸಿರುವ ಗ್ರಾಮಸ್ಥರು, ಶಾಶ್ವತ ಪರಿಹಾರಕ್ಕಾಗಿ ಇಲಾಖೆ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ.

