ಸಿಪಿಐ ಮುಖಂಡ, ಹೋಟೆಲ್ ಮಾಲೀಕ ಆತ್ಮಹತ್ಯೆ: ಕುತ್ತಿಕ್ಕೋಲ್‌ನಲ್ಲಿ ಶೋಕಸಾಗರ

​ಕಾಸರಗೋಡು: ಸಿಪಿಐ ಕುತ್ತಿಕ್ಕೋಲು ಲೋಕಲ್ ಕಮಿಟಿ ಸದಸ್ಯ, ಚೆರಿಯಕಯ ನಿವಾಸಿ ಅಶೋಕನ್ (49) ಸೋಮವಾರ ಬೆಳಿಗ್ಗೆ ತಮ್ಮದೇ ಹೋಟೆಲ್‌ನ ಅಡುಗೆ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

​ಚಹಾ ಕುಡಿಯಲು ಬಂದ ಗ್ರಾಹಕರೊಬ್ಬರು ಇದನ್ನು ಕಂಡು ತಕ್ಷಣವೇ ಸ್ಥಳೀಯರಿಗೆ ತಿಳಿಸಿದ್ದಾರೆ.

ನಾಗರಿಕರು ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರಾದರೂ, ಜೀವ ಉಳಿಸಲು ಸಾಧ್ಯವಾಗಲಿಲ್ಲ. ಕುತ್ತಿಕ್ಕೋಲ್‌ನಲ್ಲಿ ಹಲವು ವರ್ಷಗಳಿಂದ ಹೋಟೆಲ್ ನಡೆಸುತ್ತಿದ್ದ ಅಶೋಕ ಅವರ ಹಠಾತ್ ಸಾವು ಪ್ರದೇಶದಲ್ಲಿ ತೀವ್ರ ದಿಗ್ಭ್ರಮೆ ಹಾಗೂ ಶೋಕ ಮೂಡಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!