ಕೃಷಿಹೊಂಡದಲ್ಲಿ ದಂಪತಿಯ ಮೃತದೇಹ ಪತ್ತೆ; ನಿಗೂಢತೆಗೆ ತನಿಖೆ

​ಕಾಸರಗೋಡು : ವೆಳ್ಳರಿಕುಂಡ್ ಮಾಲೋಂ ಸಮೀಪದ ಕ್ಯಾರಿಯೋಟ್ ಚಾಲ್ ಎಂಬಲ್ಲಿ ತಡತ್ತಿಲ್ ನಿವಾಸಿ ಸಾಬು (56) ಹಾಗೂ ಅವರ ಪತ್ನಿ ಸಜಿ ಸಾಬು (52) ಎಂಬವರು ತಮ್ಮದೇ ಮನೆಯ ತೋಟದ ಕೃಷಿಹೊಂಡದಲ್ಲಿ ಶುಕ್ರವಾರ ಮಧ್ಯಾಹ್ನ ಸುಮಾರು 2 ಗಂಟೆಯ ಸುಮಾರಿಗೆ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

​ಹೊಂಡದಲ್ಲಿ ಮೃತದೇಹಗಳನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ವೆಳ್ಳರಿಕ್ಕುಂಡ್ ಪೊಲೀಸರು ಪ್ರಾಥಮಿಕ ಪರಿಶೀಲನೆ ನಡೆಸಿದ್ದಾರೆ.

​ಸಾವು ಸಂಭವಿಸಲು ನಿಖರ ಕಾರಣ ಏನೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಆದರೂ ನಿಗೂಢತೆ ಇರುವ ಹಿನ್ನೆಲೆಯಲ್ಲಿ ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಸ್ತೃತ ತನಿಖೆ ಆರಂಭಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!