ಬಂಗ್ರಮಂಜೇಶ್ವರದಲ್ಲಿ ಭೂಕುಸಿತ, ಮನೆ-ಬಾವಿ ನಾಶ: ಕುಟುಂಬ ಸ್ಥಳಾಂತರ

​ಮಂಜೇಶ್ವರ: ಬಂಗ್ರಮಂಜೇಶ್ವರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಗುಡ್ಡ ಕುಸಿತ ಸಂಭವಿಸಿದ್ದು, ಕನಿಲ ಭಂಡಾರ ನಿಲಯದ ಪುರುಷೋತ್ತಮ ಅವರ ಮನೆಗೆ ಭಾರಿ ಹಾನಿಯಾಗಿದೆ.

ಶುಕ್ರವಾರ ಮಣ್ಣು ಕುಸಿದು ಬಾವಿ ಸಂಪೂರ್ಣವಾಗಿ ಮುಚ್ಚಿಹೋಗಿದ್ದರೆ, ಶನಿವಾರ ಮುಂಜಾನೆ ಮತ್ತೆ ಗುಡ್ಡ ಕುಸಿದು ಮನೆಯ ಅಡುಗೆಕೋಣೆಯ ಮೇಲೆ ಬಿದ್ದಿದೆ.

ಪರಿಣಾಮ ಮನೆಯ ಭಾಗಶಃ ಹಾನಿಗೊಳಗಾಗಿದ್ದು, ಆತಂಕಗೊಂಡ ಎಂಟು ಮಂದಿಯ ಕುಟುಂಬವನ್ನು ಸುರಕ್ಷಿತವಾಗಿ ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ.

ಸುತ್ತಮುತ್ತಲಿನ ಮನೆಗಳಿಗೂ ಗುಡ್ಡ ಕುಸಿತದ ಭೀತಿ ಎದುರಾಗಿದ್ದು, ಸ್ಥಳೀಯರು ಆತಂಕದಲ್ಲಿದ್ದಾರೆ. ಘಟನಾ ಸ್ಥಳಕ್ಕೆ ಪಂಚಾಯತ್ ಮತ್ತು ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಳೆ ಮುಂದುವರಿಯುತ್ತಿದ್ದು, ಹೆಚ್ಚಿನ ಅಪಾಯದ ಸಾಧ್ಯತೆ ಇರುವುದರಿಂದ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ

SHARE
Loading spinner

Leave a Reply

Your email address will not be published. Required fields are marked *

error: Content is protected !!