ಕುಂಬಳೆ : ಕುಂಬಳೆ-ಬದಿಯಡ್ಕ ರಸ್ತೆಯಲ್ಲಿರುವ ಭಾರತ್ ಪೆಟ್ರೋಲ್ ಪಂಪ್‌ನಲ್ಲಿ ಈ ಘಟನೆ ನಡೆದಿದೆ. ಕಾರಿಗೆ ಡೀಸಲ್ ಹಾಕಿ ಮುಗಿದಿದೆ ಎಂದು ಭಾವಿಸಿದ ಚಾಲಕ ಕಾರನ್ನು ಮುನ್ನಡೆಸಿದ್ದಾನೆ.

ಈ ವೇಳೆ ಇಂಧನ ತುಂಬುವ ಪೈಪ್ ಕಾರಿನ ಡೀಸಲ್ ಟ್ಯಾಂಕ್‌ನಲ್ಲೇ ಸಿಲುಕಿಕೊಂಡಿದ್ದು, ಕಾರು ಮುಂದೆ ಚಲಿಸಿದ ರಭಸಕ್ಕೆ ಪೈಪ್ ಎಳೆಯಲ್ಪಟ್ಟು ಪೆಟ್ರೋಲ್ ಪಂಪ್‌ನ ಮೀಟರ್ ಪೆಟ್ಟಿಗೆ ನೆಲಕ್ಕೆ ಬಿದ್ದು ಸಂಪೂರ್ಣವಾಗಿ ಧ್ವಂಸಗೊಂಡಿದೆ.ಇದರ ಪರಿಣಾಮವಾಗಿ ಸುಮಾರು ಮೂರು ಗಂಟೆಗಳ ಕಾಲ ಪಂಪ್‌ನ ಕಾರ್ಯಾಚರಣೆ ಸ್ಥಗಿತಗೊಂಡಿತ್ತು.

ಘಟನೆಯಿಂದ ಸುಮಾರು ಮೂರು ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.ಕಾರಿನಲ್ಲಿದ್ದ ಪ್ರಯಾಣಿಕರು ಇಂದು ಮಧ್ಯಾಹ್ನದ ವೇಳೆಗೆ ಪೆಟ್ರೋಲ್ ಪಂಪ್‌ಗೆ ಆಗಮಿಸಿ ಸಮಸ್ಯೆಯನ್ನು ಬಗೆಹರಿಸುವುದಾಗಿ ತಿಳಿಸಿದ್ದಾರೆ ಎಂದು ಪಂಪ್ ನೌಕರರು ಹೇಳಿದ್ದಾರೆ.

