ಮರಳು ಮಾಫಿಯಾಗಳ ನೀಡುತಿದ್ದ ಕಂತು ಕಂತು ನೋಟುಗಳಿಗಾಗಿ ನಿಯಮವನ್ನು ಗಾಳಿಗೆ ತೂರಿದ ಆ(ರಕ್ಷ)ಕರು

ಮರಳು ಮಾಫಿಯಾಗಳೊಂದಿಗೆ ಪೊಲೀಸರ ನಂಟಿನ ವಿಷಯದಲ್ಲಿ ಎಳೆ ಎಳೆಯಾಗಿ ಒಂದೊಂದು ಮಾಹಿತಿ ಬಹಿರಂಗಗೊಳ್ಳುತ್ತಿದೆ. ಆರಂಭದಲ್ಲಿ ಕುಂಬಳೆ ಠಾಣೆಯ ಎಸ್ಸೈ ಯನ್ನು ಬಲೆಗೆ ಹಾಕುವ ಯತ್ನ ವಿಫಲವಾದ ಹಿನ್ನೆಲೆಯಲ್ಲಿ ಕೆಲವೊಂದು ಪೊಲೀಸರ ಒಡನಾಟದೊಂದಿಗೆ ಮರಳು ಮಾಫಿಯಾಗಳು ಸಂಪಾದಿಸಿದ್ದು ಕೋಟಿಗಟ್ಟಲೆ.

ಶ್ರಿಜೇಶ್ ಕುಂಬಳೆ ಎಸ್ಸೈ ಆಗಿ ಅಧಿಕಾರ ವಹಿಸಿದ್ದು ಒಂದೂವರೆ ವರ್ಷಕ್ಕೆ ಮೊದಲು. ಮರಳು ಮಾಫಿಯಾ ಹಾಗೂ ಮಾದಕ ದಂಧೆಕೋರರಿಗೆ ಸಿಂಹ ಸ್ವಪ್ನವಾಗಿದ್ದ ಶ್ರಿಜೇಶ್ ಮುಖ ನೋಡದೆ ಯಾವುದೇ ರಾಜಕೀಯ ಪುಡಾರಿಗಳ ಒತ್ತಾಸೆಗೂ ಬಗ್ಗದೆ ಕಟ್ಟು ನಿಟ್ಟಿನ ಕ್ರಮ ತೆಗದುಕೊಳ್ಳುವ ನಿಷ್ಟಾವಂತ ಅಧಿಕಾರಿಯಾಗಿದ್ದರು. ಠಾಣೆಯೊಳಗೂ ಹೊರಗೂ ಸುತ್ತಾಡುತ್ತಿದ್ದ ಮರಳು ಮಾಫಿಯಾಗಳನ್ನು ಹಾಗೂ ಏಜಂಟರುಗಳನ್ನು ಕಣ್ಣೆದುರಿಗೆ ಕಾಣಲು ಬಿಡುವುದು ಬಿಡಿ ಹತ್ತಿರ ಸುಳಿಯಲೂ ಬಿಡುತ್ತಿರಲಿಲ್ಲ. ಇದು ಮರಳು ಮಾಫಿಯಾಗಳಿಗೆ ಭಾರೀ ತಿರುಗೇಟಾಗಿತ್ತು.

ಎಸ್ಟೈಯನ್ನು ವರ್ಗಾವಣೆ ಮಾಡಲು ಮಾಫಿಯಾ ತಂಡ ಹಲವು ರೀತಿಯ ಸಂಚು ರೂಪಿಸಿತ್ತೆಂಬ ಮಾಹಿತಿ ಕೂಡಾ ಇದೆ. ಇದಕ್ಕಾಗಿ ಕೆಲವೊಂದು ರಾಜಕೀಯ ನೇತಾರರನ್ನು ಬಳಸಿ ಹೇಗಾದರೂ ಮಾಡಿ ಸ್ಥಳ ವರ್ಗಾವಣೆಗೊಳಿಸಲು ಪ್ರಯತ್ನ ನಡೆಸಿದೆ ಎನ್ನಲಾಗಿದೆ. ಇದಕ್ಕಾಗಿ ಕೆಲವೊಂದು ಮಂದಿ ತಿರುವನಂತಪುರ ತನಕ ಹೋದ ಬಗ್ಗೆ ಕೂಡಾ ಮಾಹಿತಿ ಲಭಿಸಿದೆ. ಇದು ಯಾವುದೂ ಫಲಪ್ರದವಾಗದ ಹಿನ್ನೆಲೆಯಲ್ಲಿ ಎಸ್ಸೈ ಯನ್ನು ವರ್ಗಾವಣೆಗೊಳಿಸಲು ಸಾಥ್ ನೀಡದ ರಾಜಕೀಯ ಪಕ್ಷದ ಕಾರ್ಯಕ್ರಮ ಸೇರಿದಂತೆ ಇತರ ಆವಶ್ಯಕತೆಗಳಿಗೂ ನಯಾಪೈಸೆ ಕೂಡಾ ನೀಡುವುದಿಲ್ಲವೆಂದು ಕೂಡಾ ಮಾಫಿಯಾ ತಂಡ ಶಪಥ ಮಾಡಿತ್ತು. ಈ ವಿಷಯದಲ್ಲಿ ಕೆಲವೊಂದು ಮಂದಿ ಪಕ್ಷದ ಕಾರ್ಯಕರ್ತರು ಪಕ್ಷವನ್ನು ತೊರೆದಿರುವ ಬಗ್ಗೆಯೂ ಜನರು ಆಡಿಕೊಳ್ಳುತಿದ್ದಾರೆ.


ಬೇರೆ ಯಾವುದೇ ದಾರಿ ಕಾಣದೇ ಇರುವಾಗ ಮರಳು ಮಾಫಿಯಾ ಕೆಲವೊಂದು ಪೊಲೀಸರ ಸಹಾಯವನ್ನು ಯಾಚಿಸಿದೆ. ಇದಕ್ಕೆ ಸಾಥ್ ನೀಡಿದ ಕೆಲವೊಂದು ಪೊಲೀಸರು ಎಸ್ಸೈಯ ಚಲನವಲನಗಳ ಬಗ್ಗೆ ಸ್ಪಷ್ಟವಾದ ಮಾಹಿತಿ ನೀಡಬೇಕೆಂಬುದು ಮಾಫಿಯಾಗಳ ಬೇಡಿಕೆಯಾಗಿತ್ತು. ಇದಕ್ಕಾಗಿ ಹಲವು ರೀತಿಯ ವಾಗ್ದಾನಗಳ ಜೊತೆಯಾಗಿ ಭಾರೀ ಮೊತ್ತವನ್ನು ಕೂಡಾ ಪೊಲೀಸರಿಗೆ ಮಾಫಿಯಾ ತಂಡ ನೀಡಿತ್ತೆಂದು ಕೂಡಾ ಹೇಳಲಾಗುತ್ತಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!