ಛತ್ತೀಸಗಡ ಕ್ರೈಸ್ತ ಭಗಿನಿಯರ ಬಂಧನ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಎಲ್ಲಾ ಸಾಂವಿಧಾನಿಕ ಶಿಷ್ಟಾಚಾರಗಳನ್ನು ಗಾಳಿಗೆ ತೂರಿ, ಕೂಗುಮಾರಿಗಳ ಕೈಗೆ ಆಡಳಿತ ಒಪ್ಪಿಸುವ ಬಿಜಿಪಿಯ ನೀಚ ರಾಜಕಾರಣವು ಭಸ್ಮಾಸುರನ ಕತೆಯಂತೆ, ಅದಕ್ಕೇ ತಿರುಗು ಬಾಣವಾಗಲಿದೆ. ಎಲ್ಲರಿಂದಲೂ ನಿರ್ಲಕ್ಷಿಸಲ್ಪಟ್ಟ ಹಳ್ಳಿಗಾಡಿನ ಆದಿವಾಸಿಗಳ ಸೇವೆ ಮಾಡುತ್ತಿದ್ದ ಇಬ್ಬರು ಕ್ರೈಸ್ತ ಭಗಿನಿಯರನ್ನು ಅನ್ಯಾಯವಾಗಿ ಬಂಧಿಸಿ ಜೈಲಿಗಟ್ಟಿದ ಛತ್ತೀಸಗಡ ಸರಕಾರವು ಅದರ ಕೆಟ್ಟ ಫಲಗಳನ್ನು ಖಂಡಿತಾ ಅನುಭವಿಸಲಿದೆ ಎಂದು ಕಾಸರಗೋಡು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀ ಸೋಮಶೇಖರ ಜೆಎಸ್ ಹೇಳಿದ್ದಾರೆ.


ಕ್ರೈಸ್ತ ಭಗಿನಿಯರನ್ನು ಅನ್ಯಾಯವಾಗಿ ಬಂಧಿಸಿ ಜೈಲಿಗಟ್ಟಿದ ಛತ್ತೀಸಗಡ ಸರ್ಕಾರದ ಸರ್ಕಾರಿ ಭಯೋತ್ಪಾದನೆ ಪ್ರತಿಭಟಿಸಿ ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಮಜಿರ್ಪಳ್ಳದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮುಹಮ್ಮದ್ ಡಿಎಂಕೆ ಅಧ್ಯಕ್ಷತೆ ವಹಿಸಿದ್ದರು.


ಕಾರ್ಯಕ್ರಮದಲ್ಲಿ ನೇತಾರರಾದ ಶಾಹುಲ್ ಹಮೀದ್ ಪೆರ್ಲ, ಉಮ್ಮರ್ ಬೋರ್ಕಳ, ಚಂದ್ರಶೇಖರ ಶೆಟ್ಟಿ ಬೆಜ್ಜ, ಹರ್ಷಾದ್ ವರ್ಕಾಡಿ, ಮನ್ಸೂರ್ ಬಿಎಂ,ಖಲೀಲ್ ಬಜಾಲ್, ಮುಹಮ್ಮದ್ ಮಜಾಲ್, ಫ್ರಾನ್ಸಿಸ್ ಡಿ’ಸೋಜಾ,ಇಕ್ಬಾಲ್ ಕಳಿಯೂರು, ಪುರುಷೋತ್ತಮ ಅರಿಬೈಲ್, ಹನೀಫ್ ಪಡಿಂಞಾರ್, ಬಾಬು ಬಂದ್ಯೋಡು, ಗಣೇಶ್ ಪಾವೂರು, ಕಮಲಾಕ್ಷಿ, ಶಾಂತಾ ಆರ್ ನಾಯ್ಕ್, ಗೀತಾ ಬಂದ್ಯೋಡು, ಮಮತಾ ದಿವಾಕರ್, ಸೀತಾ ಡಿ, ಐರಿನ್, ಜಮೀಲಾ, ರೇಶ್ಮಾ ಟಿ.ವಿ, ಅಜೀಜ್ ಕಲ್ಲೂರು, ಸತ್ಯನ್ ಉಪ್ಪಳ, ಹಮೀದ್ ಕಣಿಯೂರು, ಎಲಿಯಾಸ್ ಡಿ’ಸೋಜಾ, ಗಂಗಾಧರ ಕೆಎಸ್, ಸದಾಶಿವ ಕೆ,ಬಾಸಿತ್ ತಲೆಕ್ಕಿ, ಶೀನ ಕೆದುಂಬಾಡಿ, ರಂಜಿತ್ ಮಂಜೇಶ್ವರ, ಎಎಂ ಉಮ್ಮರ್ ಕುಂಞಿ, ಎಸ್.ಅಬ್ದುಲ್ ಖಾದರ್ ಹಾಜಿ, ವಿನೋದ್ ಪಾವೂರು, ಅಲಿ ಧರ್ಮನಗರ, ಕಮಲಾಕ್ಷ ಧರ್ಮನಗರ, ವಿಕ್ಟರ್ ಡಿ’ಸೋಜಾ, ಬಾಲಕೃಷ್ಣ, ವಸಂತರಾಜ್ ಶೆಟ್ಟಿ, ಸದಾಶಿವ ಪಜ್ವ, ಸತೀಶ್ ಅರಿಬೈಲ್, ಉಮ್ಮರ್ ಬೆಜ್ಜ, ಗೋಪಾಲ ಲೆಂಕ್ರಿಕಾಡು, ಮೂಸಾ ಡಿಕೆ, ಯಾಕೂಬ್ ಕೋಡಿ, ಮಾಲಿಂಗ ಮಂಜೇಶ್ವರ, ಅಶ್ರಫ್ ಆನೆಕಲ್ಲು, ಅಶ್ರಫ್ ಕೆಕೆ, ಅಬೂಸಾಲಿ ಮುರತ್ತಣೆ, ಮುಸ್ತಫಾ ಟಿಎ, ಸಲಾಂ ಮಾಂಕೋಡಿ, ಶಮೀರ್ ಮಾಂಕೋಡಿ, ಅಬೂಬಕ್ಕರ್ ಡಿ, ಅಬೂಬಕ್ಕರ್ ಉರ್ಣಿ, ಉಮ್ಮರ್ ಪಾಲೆಂಗ್ರಿ, ಅಬ್ದುಲ್ಲ ಹಾಜಿ ಕೆದಕ್ಕಾರ್, ಇಬ್ರಾಹಿಂ ಹಾಜಿ ಸುಳ್ಯಮೆ, ಚಂದ್ರಶೇಖರ ಅರಿಬೈಲ್, ಅಬೂಬಕ್ಕರ್ ಮಣಿಪರಂಬ, ಸಮದ್ ಕೆದಕ್ಕಾರ್, ಮೊಯ್ದಿನ್ ಹಾಜಿ ಬಳಪ್ಪು, ಶರೀಫ್ ಪಾಲೆಂಗ್ರಿ, ಟಿಎಂ ಮೊಯ್ದಿನ್ ,ಕೆಎಚ್ ಅಬೂಬಕ್ಕರ್, ಮುಸ್ತಫಾ ವೇದೋಡಿ, ಇಬ್ರಾಹಿಂ ಧರ್ಮನಗರ ಮುಂತಾದವರು ಉಪಸ್ಥಿತರಿದ್ದರು.
ಶ್ರೀ ದಿವಾಕರ ಎಸ್ ಜೆ ಸ್ವಾಗತಿಸಿ, ಶ್ರೀ ಮುಹಮ್ಮದ್ ಸೀಗಂಡಡಿ ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!