ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವಕ್ಕೆ ಕಾರ್ಯಕಾರಿ ಸಮಿತಿ ಆಯ್ಕೆ…..!

ಕಾಸರಗೋಡು: ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ‘ಶ್ರೀ ದುರ್ಗಾಂಬಾ ವೇದಿಕೆ’ಯಲ್ಲಿ ಅ.11ರಿಂದ 20ರವರೆಗೆ ನಡೆಯಲಿರುವ ‘ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ-2026’ರ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದೆ.

ದಸರಾ ಸಾಂಸ್ಕೃತಿಕೋತ್ಸವದ ನಿರ್ದೇಶಕರಾಗಿ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ, ಪಾಂಗೋಡು ಶ್ರೀ ಪ್ರವೀಣ್ ನಾಯಕ್ ಹಾಗೂ ಶ್ರೀ ಪ್ರದೀಪ್ ಬೇಕಲ್ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಧಾನ ಸಂಚಾಲಕರಾಗಿ ಕನ್ನಡ ಭವನದ ಡಾ. ವಾಮನ್ ರಾವ್ ಬೇಕಲ್ ,ಸಂಚಾಲಕರಾಗಿ ವಸಂತ್ ಕೆರೆಮನೆ, ಜಗನ್ನಾಥ್ ಶೆಟ್ಟಿ ಪಿ.ಕೆ., ಅಖಿಲೇಶ್ ನಗುಮುಗಮ್, ವಸಂತ ಭಾರಡ್ಕ, ಗುರುರಾಜ್ ಕಾಸರಗೋಡು, ಗಿರೀಶ್ ಪಿ.ಎಂ. ಚಿತ್ತಾರಿ, ರಾಜೇಶ್ ಕೋಟೆಕಣಿ, ನವೀನ್ ನಾಯಕ್ ನಾಗರಕಟ್ಟೆ, ಮುರಳಿ ಪಾರಕಟ್ಟೆ ಹಾಗೂ ಪ್ರದೀಪ್ ನಾಯ್ಕ್ ನಾಗರಕಟ್ಟೆ ಅವರನ್ನು ಆಯ್ಕೆ ಮಾಡಲಾಗಿದೆ.

ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವದಲ್ಲಿ ವಿವಿಧ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಕಾಸರಗೋಡಿನ ಕನ್ನಡ ಸಂಸ್ಕೃತಿ, ಸಾಹಿತ್ಯ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಉತ್ಸವವನ್ನು ಆಯೋಜಿಸಲಾಗಿದೆ.

ಉತ್ಸವದ ಅಂಗವಾಗಿ ‘ಕಾಸರಗೋಡು ದಸರಾ ಕವಿ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ-2026’ ಹಾಗೂ ‘ಕಾಸರಗೋಡು ದಸರಾ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ-2026’ ಪ್ರದಾನ ಮಾಡಲಾಗುವುದು. ಕವಿ ಶ್ರೇಷ್ಠ ಪ್ರಶಸ್ತಿಗೆ ಕನ್ನಡ ಭವನದ ಸನತ್ ಕುಮಾರ್ ಕೆ.ಪಿ. ಹಾಗೂ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿಗೆ ಕಾರ್ತಿಕ್ ಕಾಸರಗೋಡು ಸಹಕಾರ ನೀಡಲಿದ್ದಾರೆ.

ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಾಂಸ್ಕೃತಿಕ ಘಟಕ, ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ಹಾಗೂ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ದಸರಾ ಸಾಂಸ್ಕೃತಿಕೋತ್ಸವ ನಡೆಯಲಿದೆ.

SHARE
Loading spinner

2 thoughts on “ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವಕ್ಕೆ ಕಾರ್ಯಕಾರಿ ಸಮಿತಿ ಆಯ್ಕೆ…..!”

Leave a Reply

Your email address will not be published. Required fields are marked *

error: Content is protected !!