ಮೊಗ್ರಾಲ್ ಪುತ್ತೂರಿನಲ್ಲಿ ಸರಣಿ ಅಪಘಾತ: ಕಾರು, ಲಾರಿ, ಕರ್ನಾಟಕದ ಬಸ್ ನಡುವೆ ಡಿಕ್ಕಿ

​ಕಾಸರಗೋಡು : ಮೊಗ್ರಾಲ್ ಪುತ್ತೂರು ಪಂಚಾಯತ್ ಕಚೇರಿ ಬಳಿ ಶುಕ್ರವಾರ ಮುಂಜಾನೆ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ನಿಯಂತ್ರಣ ತಪ್ಪಿದ ಕಾರಿಗೆ ಲಾರಿ ಢಿಕ್ಕಿ ಹೊಡೆದಿದ್ದು, ಆ ಲಾರಿಗೆ ಕೊಲ್ಲೂರಿಗೆ ತೆರಳುತ್ತಿದ್ದ ಕರ್ನಾಟಕದ ಬಸ್ ಹಿಂಬದಿಯಿಂದ ಬಡಿದಿದೆ. ರಸ್ತೆಯಲ್ಲಿ ಬಿದ್ದಿದ್ದ ಗಾಜಿನ ಚೂರುಗಳಿಂದಾಗಿ ಬೈಕ್ ಸವಾರನೊಬ್ಬ ಜಾರಿ ಬಿದ್ದು ಗಾಯಗೊಂಡಿದ್ದಾನೆ.

​ಅಪಘಾತದ ತೀವ್ರತೆಗೆ ಬಸ್ಸಿನ ಬಾಗಿಲುಗಳು ಜಜ್ಜಲ್ಪಟ್ಟು ಪ್ರಯಾಣಿಕರು ಒಳಗಡೆಯೇ ಸಿಲುಕಿಕೊಂಡಿದ್ದರು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಕಾಸರಗೋಡು ಅಗ್ನಿಶಾಮಕದಳದ ಸಿಬ್ಬಂದಿ, ಏಣಿಯ ನೆರವಿನಿಂದ ತುರ್ತು ನಿರ್ಗಮನ ಬಾಗಿಲ ಮೂಲಕ ಪ್ರತಿಯೊಬ್ಬ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ.

ಬಳಿಕ ರಸ್ತೆಯಲ್ಲಿದ್ದ ಗಾಜಿನ ಚೂರುಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

SHARE
Loading spinner

One thought on “ಮೊಗ್ರಾಲ್ ಪುತ್ತೂರಿನಲ್ಲಿ ಸರಣಿ ಅಪಘಾತ: ಕಾರು, ಲಾರಿ, ಕರ್ನಾಟಕದ ಬಸ್ ನಡುವೆ ಡಿಕ್ಕಿ”

Leave a Reply

Your email address will not be published. Required fields are marked *

error: Content is protected !!