
ಮಂಜೇಶ್ವರ: ಹೊಸಂಗಡಿ ರೈಲ್ವೇ ಗೇಟ್‌ನ ದುರಸ್ತಿ ಕಾಮಗಾರಿ ಕೊನೆಗೂ ಇಂದಿನಿಂದ ಶುರುವಾಗಿದ್ದು, ಸಾರ್ವಜನಿಕ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಗೇಟ್ ಬಳಿ ಅತ್ಯಾಧುನಿಕ ರೀತಿಯಲ್ಲಿ ರಿಪೇರಿ ಕೆಲಸ ನಡೆಯುತ್ತಿದ್ದು, ಕಾಮಗಾರಿ ಮುಗಿಯಲು ಕನಿಷ್ಠ ಒಂದು ವಾರ ಬೇಕಾಗಬಹುದು.

ಮಂಜೇಶ್ವರ ಒಳಪೇಟೆಯಲ್ಲಿ ಶಾಲೆಗಳು, ಸರ್ಕಾರಿ ಕಚೇರಿಗಳು ಹಾಗೂ ಆರಾಧನಾಲಯಗಳಿದ್ದು, ನವರಾತ್ರಿ ಹಬ್ಬದ ಸಾಲು ಸಾಲು ರಜೆಗಳ ನಡುವೆ ಈ ರಸ್ತೆ ಬಂದ್ ಆಗಿರುವುದು ಸಾರ್ವಜನಿಕರಿಗೆ ತೀವ್ರ ಸಂಚಾರ ಸಂಕಟ ತಂದೊಡ್ಡಿದೆ.
ಪ್ರಯಾಣಿಕರು ಮಂಜೇಶ್ವರದ ಪರ್ಯಾಯ ಮಾರ್ಗಗಳನ್ನು ಬಳಸಬೇಕಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ದುರಸ್ತಿ ಕೆಲಸವನ್ನು ಆದಷ್ಟು ಬೇಗ ಮುಗಿಸಿ ಗೇಟ್ ತೆರೆಯುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.


