ಮದುವೆ ಭರವಸೆ ನೀಡಿ ಮಹಿಳೆಯರಿಗೆ ವಂಚನೆ:ಆರೋಪಿ ಬಂಧನ

ಕಾಸರಗೋಡು : ವೈದ್ಯ ಹಾಗೂ ಇಂಜಿನಿಯರ್ ಎಂದು ಹೇಳಿಕೊಂಡು ಮದುವೆ ಭರವಸೆ ನೀಡಿ, ನೂರಕ್ಕೂ ಹೆಚ್ಚು ಮಹಿಳೆಯರಿಂದ ಚಿನ್ನಾಭರಣ ಹಾಗೂ ಹಣ ದೋಚುತ್ತಿದ್ದ ಕುಖ್ಯಾತ ವಂಚಕ ವಯನಾಡಿನ ಬಿಜು ಆಂಟನಿ (45) ಚೇರ್ತಲ ಪೊಲೀಸರ ಬಲೆಗೆ ಬಿದ್ದಿದ್ದಾನೆ.ಸುಲ್ತಾನ್ ಬತ್ತೇರಿಯಲ್ಲಿ ಪತ್ನಿ-ಮಕ್ಕಳೊಂದಿಗೆ ಇದ್ದಾಗ ಈತನನ್ನು ಬಂಧಿಸಲಾಗಿದೆ.

​2020ರಲ್ಲಿ ರಾಜೇಶ್ ಎಂಬ ಹೆಸರಿನಲ್ಲಿ ಮೊದಲ ವಂಚನೆ ಎಸಗಿದ್ದ ಈತ, ತಳಿಪರಂಬದ ಯುವತಿಯನ್ನು ಹೊಸಂಗಡಿ ಲಾಡ್ಜ್‌ಗೆ ಕರೆತಂದು ಲೈಂಗಿಕ ಕಿರುಕುಳ ನೀಡಿ, ಮೂರೂವರೆ ಪವನ್ ಚಿನ್ನ ದೋಚಿದ್ದನೆಂದು ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಮದುವೆ ಜಾಹೀರಾತುಗಳ ಮೂಲಕ ವಿವಿಧ ಹೆಸರುಗಳಲ್ಲಿ ಮಹಿಳೆಯರನ್ನು ಪರಿಚಯಿಸಿಕೊಂಡು, ವಂಚಿಸಿ ಪರಾರಿಯಾಗುವುದು ಈತನ ಕೃತ್ಯವಾಗಿತ್ತು. ಸುದೀರ್ಘ ಆರನೇ ವರ್ಷದಲ್ಲಿ ಕೊನೆಗೂ ಈ ವಂಚಕ ಪೊಲೀಸರ ಬಲೆಗೆ ಬಿದ್ದಿದ್ದಾನೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!