ಮಂಜೇಶ್ವರ ಉಪಜಿಲ್ಲಾ ಕ್ರೀಡಾಕೂಟ: ಎಸ್ ಎ ಟಿ ಶಾಲೆಗೆ ಸಮಗ್ರ ಚಾಂಪಿಯನ್‌ಶಿಪ್ ಗರಿ

ಮಂಜೇಶ್ವರ: ಇತ್ತೀಚೆಗೆ ಕೊಡ್ಲಮೊಗರು ವಾಣಿ ವಿಜಯ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ‘ಎಸ್.ಎ.ಟಿ’ ಶಾಲೆ ಸಮಗ್ರ ಚಾಂಪಿಯನ್ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

​ಅಕ್ಟೋಬರ್ 6 ರಿಂದ 8 ರವರೆಗೆ ನಡೆದ ಈ ಕೂಟದಲ್ಲಿ 100ಕ್ಕೂ ಹೆಚ್ಚು ಶಾಲೆಗಳ 3,000ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದರು. SAT ಶಾಲೆಯ 180 ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿ, ಹೈಯರ್ ಸೆಕೆಂಡರಿ ವಿಭಾಗದಲ್ಲೂ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

​ಸಾಧನೆಯ ಪ್ರಯುಕ್ತ ಶಾಲೆಯಲ್ಲಿ ವಿಜಯೋತ್ಸವ ಮೆರವಣಿಗೆ ಆಯೋಜಿಸಲಾಗಿತ್ತು.
ಪಿ ಟಿ ಎ ಅಧ್ಯಕ್ಷ ಇಬ್ರಾಹಿಂ ಚಂದಳಿಕೆ, ಸಲಹಾ ಸಮಿತಿ ಪ್ರತಿನಿಧಿ ರಮಾ ಬಾಯಿ, ಪ್ರಾಂಶುಪಾಲೆ ಸುಮನ, ಹೆಡ್‌ಮಾಸ್ಟರ್, ಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿ ನೇತೃತ್ವ ವಹಿಸಿದ್ದರು.

ಶ್ರೀಮದ್ ಅನಂತೇಶ್ವರ ದೇವಳದ ಪರಿಸರದಲ್ಲಿ ವಿದ್ಯಾರ್ಥಿಗಳಿಗೆ ಪಾನೀಯ ವ್ಯವಸ್ಥೆ ಮಾಡಲಾಗಿತ್ತು. ಶಾಲಾ ಬ್ಯಾಂಡ್ ತಂಡ ಮೆರವಣಿಗೆಗೆ ಮೆರಗು ನೀಡಿತು. ಸಾಧಕ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ ಅಭಿನಂದಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!