ತೀರ್ಥಯಾತ್ರೆಗೆ ತೆರಳಿದ್ದ ಮಂಜೇಶ್ವರದ ವ್ಯಕ್ತಿ ದೆಹಲಿಯಲ್ಲಿ ನಾಪತ್ತೆ

ಮಂಜೇಶ್ವರ : ​ಅಜ್ಮೀರ್-ದೆಹಲಿ ತೀರ್ಥಯಾತ್ರೆಗೆ ತೆರಳಿದ್ದ ಕಾಸರಗೋಡು ಮಂಜೇಶ್ವರದ ಮಚ್ಚಂಪಾಡಿ ಪುಚ್ಚತ್ತಬೈಲ್ ನಿವಾಸಿ ಇಬ್ರಾಹಿಂ ಎಂಬವರ ಪುತ್ರ ಉಸೈನಾರ್ (58) ಅವರನ್ನು ದೆಹಲಿಯಲ್ಲಿ ಕಾಣೆಯಾಗಿದೆ.ಅಕ್ಟೋಬರ್ 13, 2026ರಂದು ಸಂಜೆ 7:30ರ ಸುಮಾರಿಗೆ ದೆಹಲಿಯ ಐತಿಹಾಸಿಕ ಜಾಮಾ ಮಸೀದಿ ಬಳಿಯಿಂದ ಅವರು ನಾಪತ್ತೆಯಾಗಿದ್ದಾರೆ.

ಕುಟುಂಬಸ್ಥರು ವಿವಿಧೆಡೆ ಹುಡುಕಾಡಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ಈ ಕುರಿತು ಮಂಜೇಶ್ವರ ಹಾಗೂ ದೆಹಲಿ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

​ಉಸೈನಾರ್ ಅವರ ಬಗ್ಗೆ ಯಾವುದೇ ಮಾಹಿತಿ ದೊರೆತರೆ, ಮಚ್ಚಂಪಾಡಿ ವಾರ್ಡ್ 9ರ ಸದಸ್ಯ ಶರೀಫ್ ಪಾವೂರು ಅವರನ್ನು 7558904900 ಸಂಖ್ಯೆಗೆ ಸಂಪರ್ಕಿಸುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!