ಪರಂಬಳ ಕಯ್ಯಾರಿನಲ್ಲಿ ಅ.25ರಂದು ಉಚಿತ ನೇತ್ರ ತಪಾಸಣೆ ಮತ್ತು ಆಯುರ್ವೇದ ಚಿಕಿತ್ಸಾ ಶಿಬಿರ

ಉಪ್ಪಳ: ಸಂಘಶಕ್ತಿ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ (ರಿ.) ಪರಂಬಳ ಕಯ್ಯಾರು ಇದರ ನೇತೃತ್ವದಲ್ಲಿ ಹಾಗೂ ದುರ್ಗಾಶಕ್ತಿ ಕುಣಿತ ಭಜನಾ ತಂಡ ಪರಂಬಳ ಕಯ್ಯಾರು ಇದರ ಆಶ್ರಯದಲ್ಲಿ ಅಕ್ಟೋಬರ್ 25ರ ಭಾನುವಾರ ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ಆಯುರ್ವೇದ ಚಿಕಿತ್ಸಾ ಶಿಬಿರ ನಡೆಯಲಿದೆ.ಪರಂಬಳ ಕಯ್ಯಾರಿನ ಭಾರತ ಮಾತಾ ಸೇವಾ ಟ್ರಸ್ಟ್‌ನಲ್ಲಿ ಬೆಳಿಗ್ಗೆ 8.30ರಿಂದ ಶಿಬಿರ ಆರಂಭವಾಗಲಿದೆ.

ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಂ ಚಾರಿಟೇಬಲ್ ಟ್ರಸ್ಟ್, ಓನ್ ಸೈಟ್ ಎಕ್ಸ್‌ಪ್ಲೋರ್ ಲಕೋಟಿಕಾ ಫೌಂಡೇಶನ್ ಬೆಂಗಳೂರು, ಮಂಗಳೂರಿನ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಡಾ. ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್‌ಗಳ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಆಯೋಜಿಸಲಾಗಿದೆ.

ಅದೇ ರೀತಿ, ಮಂಗಳೂರಿನ ತಲಪಾಡಿಯ ಶ್ರೀ ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರವೂ ನಡೆಯಲಿದೆ.

ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರು ಶಿಬಿರಕ್ಕೆ ಆಶೀರ್ವಚನ ನೀಡಲಿದ್ದಾರೆ. ಸಂಘಶಕ್ತಿ ಕಯ್ಯಾರು ಅಧ್ಯಕ್ಷ ಪ್ರಶಾಂತ್ ಕಯ್ಯಾರು ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಶ್ರೀಕೃಷ್ಣ ಪ್ರಸಾದ್ ಶಿಬಿರವನ್ನು ಉದ್ಘಾಟಿಸಲಿದ್ದಾರೆ.

ಅತಿಥಿಗಳಾಗಿ ಶ್ರೀ ಸಂದೀಪ್ ಬೇಕಲ್ ಪ್ರಿನ್ಸ್‌ಪಾಲ್, ಶಾರದಾ ಆಯುರ್ವೇದ ಕಾಲೇಜು ತಲಪಾಡಿ, ಶ್ರೀ ಮೋಹನದಾಸ
ಟ್ರಸ್ಟಿ, ಜೆ.ಎಸ್‌.ಎನ್.ಎಂ. ಚಾರಿಟಬಲ್ ಟ್ರಸ್ಟ್, ಕೊಂಡೇವೂರು ,ಡಾ. ಗೋಪಿನಾಥನ್ (ವೈದ್ಯಾಧಿಕಾರಿ, ಜಿಲ್ಲಾ ಆಯುರ್ವೇದ ಆಸ್ಪತ್ರೆ, ಕಣ್ಣೂರು)
ಶ್ರೀಮತಿ ರಮ್ಯಾ ಯನ್ ದರ್ಬೆತ್ತಡ್ಕ ಮಕ್ಕಳ ಸಹಾಯವಾಣಿ ಕೇಂದ್ರದ ಮುಖ್ಯಸ್ಥೆ,
ಗೌರವ ಮಾರ್ಗದರ್ಶಕಿ ದುರ್ಗಾ ಶಕ್ತಿ ಕುಣಿತ ಭಜನಾ ತಂಡ ಪರಂಬಳ ಕಯ್ಯಾರು,
ಶ್ರೀ ಗಿರೀಶ್ ಕುಮಾರ್ ಕಯ್ಯಾರು ಅಧ್ಯಕ್ಷರು ಭಾರತ ಮಾತಾ ಸೇವಾ ಟ್ರಸ್ಟ್ ಪರಂಬಳ ಕಯ್ಯಾರು
ಶ್ರೀ ಪ್ರಸಾದ್ ರೈ ಕಯ್ಯಾರು ಮಾಜಿ ಬ್ಲಾಕ್ ಪಂಚಾಯತ್ ಸದಸ್ಯರು ಇವರು ವಹಿಸಲಿದ್ದಾರೆ .

ಈ ಉಚಿತ ಆರೋಗ್ಯ ಶಿಬಿರದ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಸಂಘಟಕರು ಮನವಿ ಮಾಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!