ವರ್ಕಾಡಿ ಪಂಚಾಯತು ಕುಟುಂಬ ಶ್ರೀ ಅಧ್ಯಕ್ಷೆಯ ದಬ್ಬಾಳಿಕೆ ಖಂಡನಿಯ -ಬಿಜೆಪಿ

ವರ್ಕಾಡಿ ಪಂಚಾಯತು ಕುಟುಂಬ ಶ್ರೀ ಚೇರ್ ಪರ್ಸನ್ ಪಂಚಾಯತ್ ನಲ್ಲಿ ಬರುವ ನಾಗರಿಕರ ಮೇಲೆ ದಬ್ಬಾಳಿಕೆ ಮಾಡುತ್ತಿರುವುದು ಮತ್ತು ರಾಜಕೀಯವಾಗಿ ತನ್ನ ಪಕ್ಷದವರು ಅಲ್ಲದವರ ಮೇಲೆ ವಿರೋಧ ಮಾಡುವುದು, ಹಾಗೂ ಪೊಲೀಸ್ ಠಾಣೆ ಯಲ್ಲಿ ನಕಲಿ ಕೇಸ್ ಧಾಖಲಿಸಿ ಬೆದರಿಸುವುದು ಜನ ವಿರೋಧಿನೀತಿ,ಪಂಚಾಯತ್ ಕಚೇರಿ ಜನತೆಯ ಬೇಡಿಕೆ ಗಳಿಗೆ ಸ್ಪಂದಿಸಲು ಇರುವಂತದ್ದು ಅಲ್ಲದೆ ಸಹಾಯ ಕೇಳಿ ಬರುವ ಜನರಿಗೆ ಬೇಧರಿಸಲು ಇರುವುದಲ್ಲ. ಎಂದು ಬಿಜೆಪಿ ವರ್ಕಾಡಿ ಪಂಚಾಯತ್ ಆರೋಪಿಸಿದೆ.

ವೆಲ್ಫೇರ್ ಸ್ಥಾಯಿ ಸಮಿತಿ ಅಡಿಯಲ್ಲಿ ಬರುವ ಕುಟುಂಬ ಶ್ರೀ ವಿವರಗಳನ್ನು, ಸಭೆ ಸೇರುವಾಗ, ಮೀಟಿಂಗ್ ಮಾಡುವಾಗ ವೆಲ್ಫೇರ್ ಸ್ಥಾಯಿ ಸಮಿತಿಗೆ ತಿಳಿಸ ಬೇಕಾದದ್ದು ಕುಟುಂಬ ಶ್ರೀ ಚೇರ್ ಪರ್ಸನ್ ರವರ ಕರ್ತವ್ಯ.


ಅಧ್ಯಕ್ಷರಾದ ರಾಜ್ ಕುಮಾರ್ ಕುಟುಂಬ ಶ್ರೀ ನೀಡಬೇಕಾದ ಲೋನ್ ತಡ ಆಗುವ ಬಗ್ಗೆ ಹಾಗೂ ಕುಟುಂಬ ಶ್ರೀ ಕಚೇರಿಗೆ ಬರುವ ನಾಗರಿಕರನ್ನು ಬೆದರಿಸುವ ಹೌಹಾರುವ ವಿಜಯಲಕ್ಷ್ಮಿ ಯ ಕ್ರಮವನ್ನು ಪ್ರಶ್ನೆಸಿದಕ್ಕೆ ರಾಜ್ ಕುಮಾರ್ ಸಹಿತ ಬಿಜೆಪಿ ನೇತಾರರ ಹೆಸರು ಸೇರಿಸಿ ನಕಲಿ ಪೊಲೀಸ್ ಕೇಸ್ ನೀಡಿರುವ ದುರುದ್ದೇಶ ರಾಜಕೀಯ ಪ್ರೇರಿತ.

ವೆಲ್ಫೇರ್ ಅದಿನದಲ್ಲಿ ಬರುವ ಕುಟುಂಬ ಶ್ರೀ ವಿಚಾರ ವನ್ನು ವೆಲ್ಫೇರ್ ಅಧ್ಯಕ್ಷರು ಕೇಳಬಾರದು ಎಂದು ಹೇಳುವ cds ಮುಖ್ಯಸ್ಥೆಯ ಉದ್ದಾಟ ತನ ಅಹಂಕಾರದ ಪರಮಾವಾದಿ ದಬ್ಬಾಳಿಕೆಗೆ ಬೆಂಬಲ ನೀಡುವ ಪಂಚಾಯತ್ ಅಧ್ಯಕ್ಷರ ಕಾರ್ಯವೈಖರಿ ಯನ್ನು ಬಿಜೆಪಿ ಪ್ರಶ್ನೆಸಿದೆ.ಕುಟುಂಬ ಶ್ರೀ ವರ್ಕಾಡಿ ಪಂಚಾಯತ್ ನಲ್ಲಿ ಕೂಡಲೇ ಲೋನ್ ವಿತರಣೆ ಮಾಡದಿದ್ದರೆ ಪ್ರತಿಭಟನೆ ಮಾಡಲು ಬಿಜೆಪಿ ನಿರ್ಧರಿಸಿದೆ

SHARE
Loading spinner

Leave a Reply

Your email address will not be published. Required fields are marked *

error: Content is protected !!