
ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ಅಕ್ಟೋಬರ್ 29ರಂದು ಸಂಜೆ 3.30ಕ್ಕೆ ಪಯಸ್ವಿನಿ ಸಭಾಂಗಣದಲ್ಲಿ ‘ಸಾಹಿತ್ಯ ಸಂಸ್ಕೃತಿ ಸಿರಿ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕುಲಪತಿ ಪ್ರೊ. ಸಿದ್ದು ಪಿ. ಅಲಗೂರು ಉದ್ಘಾಟಿಸಲಿದ್ದು, ಕಸಾಪ ಕೇರಳ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ತೊಟ್ಟೆತ್ತೋಡಿ ‘ಕರಾವಳಿ ಕಲಾ ಸಂಪತ್ತು’ ವಿಷಯವಾಗಿ ಉಪನ್ಯಾಸ ನೀಡಲಿದ್ದಾರೆ.

ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಪದ್ಮಶ್ರೀ ಹರೇಕಳ ಹಾಜಬ್ಬ ಅವರಿಗೆ ಈ ಸಂದರ್ಭದಲ್ಲಿ ಗೌರವ ಸನ್ಮಾನ ನೆರವೇರಲಿದೆ.

ವಿವಿಯ ಪ್ರಮುಖ ಅಧಿಕಾರಿಗಳು ಭಾಗವಹಿಸಲಿರುವ ಈ ಸಮಾರಂಭದಲ್ಲಿ ಸಂಜೆ 5ಕ್ಕೆ ಸಾಂಪ್ರದಾಯಿಕ ಕಲಾ ಪ್ರದರ್ಶನ ಹಾಗೂ 5.30ರಿಂದ ಪ್ರಸಿದ್ಧ ‘ಮಹಿಷಮರ್ದಿನಿ’ ಯಕ್ಷಗಾನ ಬಯಲಾಟ ಜರುಗಲಿದೆ.

ಸಾಹಿತ್ಯ ಮತ್ತು ಕರಾವಳಿಯ ಜಾನಪದ ಕಲಾ ವೈಭವವನ್ನು ಸಾರುವ ಈ ಸಾಂಸ್ಕೃತಿಕ ಹಬ್ಬಕ್ಕೆ ಎಲ್ಲರಿಗೂ ಆದರದ ಆಹ್ವಾನವಿದೆ.

