ಕಾಸರಗೋಡಿನಲ್ಲಿ ಶಾಲೆಯಿಂದಲೇ ನಾಪತ್ತೆಯಾದ ಪ್ಲಸ್ ಒನ್, ಪ್ಲಸ್ ಟೂ ವಿದ್ಯಾರ್ಥಿಗಳು: ಕರ್ನಾಟಕದ ಧಾರ್ಮಿಕ ಕ್ಷೇತ್ರದಲ್ಲಿ ಇರುವ ಶಂಕೆ

ಕಾಸರಗೋಡು : ಬೇಕಲ ಪೊಲೀಸ್ ಉಪವಿಭಾಗದ ಸರ್ಕಾರಿ ಶಾಲೆಯೊಂದರ ಪ್ಲಸ್‌ ಒನ್ (16 ವರ್ಷ) ಹಾಗೂ ಪ್ಲಸ್‌ ಟೂ (17 ವರ್ಷ) ವಿದ್ಯಾರ್ಥಿಗಳು ದಿಢೀರ್ ನಾಪತ್ತೆಯಾಗಿದ್ದಾರೆ. ಬುಧವಾರ ಎಂದಿನಂತೆ ಶಾಲೆಗೆ ಆಗಮಿಸಿದ್ದ ಇವರಿಬ್ಬರು, ಮಧ್ಯಾಹ್ನದ ವೇಳೆಗೆ ತರಗತಿಯಿಂದ ಗೈರಾಗಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಶಾಲಾಡಳಿತ ಮಂಡಳಿಯು ಪೋಷಕರಿಗೆ ಹಾಗೂ ಪೊಲೀಸರಿಗೆ ತುರ್ತು ಮಾಹಿತಿ ರವಾನಿಸಿದೆ.

ಇನ್ನೂ ಅಧಿಕೃತ ದೂರು ದಾಖಲಾಗದಿದ್ದರೂ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಸದ್ಯ ನಾಪತ್ತೆಯಾಗಿರುವ ಇಬ್ಬರೂ ನೆರೆಯ ಕರ್ನಾಟಕದ ಧಾರ್ಮಿಕ ಕ್ಷೇತ್ರವೊಂದರಲ್ಲಿದ್ದಾರೆ ಎಂಬ ಸುಳಿವು ಲಭ್ಯವಾಗಿದ್ದು, ಪೊಲೀಸರು ಆ ನಿಟ್ಟಿನಲ್ಲಿ ತನಿಖೆ ತೀವ್ರಗೊಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!