ವಂದೇ ಭಾರತ್ ರೈಲಿಗೆ ಹಾರಿ ಯುವಕ ಆತ್ಮಹತ್ಯೆ: ಕಾರಣ ನಿಗೂಢ

​

ಕಾಸರಗೋಡು : ಪಳ್ಳಂನಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಾರಿ ಪಾಲಕ್ಕಾಡ್ ಮೂಲದ ಟಿ. ಜಿತಿನ್ (26) ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ತಿರುವನಂತಪುರದಿಂದ ಮಂಗಳೂರಿಗೆ ತೆರಳುತ್ತಿದ್ದ ರೈಲಿನೆದುರು ಆತ ಮುಂಜಾನೆ ಈ ಕೃತ್ಯ ಎಸಗಿದ್ದಾನೆ.
​ಘಟನಾ ಸ್ಥಳದಲ್ಲಿದ್ದ ಪರ್ಸ್‌ನಲ್ಲಿದ್ದ ಆಧಾರ್ ಕಾರ್ಡ್ ಹಾಗೂ ಮೊಬೈಲ್ ಫೋಟೋಗಳ ಆಧಾರದ ಮೇಲೆ ಪೊಲೀಸರು ಮೃತರನ್ನು ಗುರುತಿಸುವ ಪ್ರಯತ್ನ ನಡೆಸಿದ್ದಾರೆ.

ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಯುವಕ ಪಾಲಕ್ಕಾಡ್‌ನಿಂದ ಕಾಸರಗೋಡಿಗೆ ಬರಲು ಹಾಗೂ ತೀವ್ರ ನಿರ್ಧಾರ ಕೈಗೊಳ್ಳಲು ಕಾರಣವೇನು ಎಂಬುದು ತನಿಖೆಯಿಂದಷ್ಟೇ ಹೊರಬರಬೇಕಿದೆ. ಕುಟುಂಬಸ್ಥರು ಆಗಮಿಸಿದ ಬಳಿಕವಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ನಗರಠಾಣೆ ಪೊಲೀಸರು ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!