
ಕುಂಬಳೆ : ಇಲ್ಲಿಯ ನಗರದಲ್ಲಿ ಸಂಘರ್ಷ ಸೃಷ್ಟಿಸಿ, ಒಡಿಶಾ ಮೂಲದ ಮೀನುಗಾರ ಕಾರ್ಮಿಕನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಕೋಯಿಪ್ಪಾಡಿ ನಿವಾಸಿ ಆಸಿಫ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಒಡಿಶಾ ತ್ಯೂಶಾಂಪುರ ಮೂಲದ ಸಂತೋಷ್ ಬೆಹೆರಾ (44) ಹಲ್ಲೆಗೊಳಗಾದವರು.

ಶುಕ್ರವಾರ ಮುಂಜಾನೆ 1 ಗಂಟೆಯ ಸುಮಾರಿಗೆ ಸಂತೋಷ್ ಅವರ ಕೋಣೆಗೆ ನುಗ್ಗಿದ ಆಸಿಫ್, ಕೊಠಡಿಯಿಂದ ಹೊರಹೋಗುವಂತೆ ಬೆದರಿಕೆ ಹಾಕಿದ್ದಾರೆ.
ಬೆಂಕಿಪೆಟ್ಟಿಗೆ ಕೇಳಿ ಕೊಡದಿದ್ದಕ್ಕೆ ಉಂಟಾದ ವಿವಾದದಿಂದ ಆಸಿಫ್ ಹಲ್ಲೆ ನಡೆಸಿದ್ದಾನೆನ್ನಲಾಗಿದೆ.

ಸಂತೋಷ್ ಅವರ ತಲೆಗೆ ಹೊಡೆದು, ಕುತ್ತಿಗೆ ಹಿಡಿದು ಗೋಡೆಯ ಕನ್ನಡಿಗೆ ತಲೆ ಗುದ್ದಿ ಗಾಯಗೊಳಿಸಿದ್ದಾರೆ. ಕನ್ನಡಿ ಒಡೆದು ಸಂತೋಷ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸ್ಟೇಷನ್‌ಗೆ ಹಾಜರಾಗಲು ಸೂಚಿಸಿದರೂ ಆಸಿಫ್ ಬಾರದೆ ಗಲಭೆ ಸೃಷ್ಟಿಸಿದ್ದಾರೆ.

ನಂತರ ಸಿಐ ಆರ್‌ಪಿ ಅನೂಪ್ ಕೃಷ್ಣ, ಎಸ್‌ಎಚ್‌ಒ ಎಸ್. ಅನೂಪ್ ಮತ್ತು ಎಸ್‌ಐ ವಿಶಾಖ್ ನೇತೃತ್ವದಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.ನರಹತ್ಯೆ ಯತ್ನ ಹಾಗೂ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಕೋರ್ಟ್‌ಗೆ ಹಾಜರುಪಡಿಸಲಾಗುವುದಾಗಿ ಪೊಲೀಸರು ತಿಳಿಸಿದ್ದಾರೆ.

