ಸೂರಂಬೈಲು: ಅಡೂರಿನಲ್ಲಿ ನಡೆದ ಕುಂಬಳೆ ಉಪಜಿಲ್ಲಾ ವೃತ್ತಿಪರಿಚಯ ಮೇಳದಲ್ಲಿ ಸೂರಂಬೈಲು ಸರ್ಕಾರಿ ಪ್ರೌಢಶಾಲೆಯ ಆರನೇ ತರಗತಿ ವಿದ್ಯಾರ್ಥಿನಿ ಪ್ರಾಪ್ತಿ ಪಿ. ಶೆಟ್ಟಿ ಪ್ರಥಮ ಸ್ಥಾನ ಪಡೆದು ಎ ಗ್ರೇಡ್ ಸಾಧನೆ ಮಾಡಿದ್ದಾರೆ.

ಯುಪಿ ವಿಭಾಗದ ಚಾರ್ಟ್ ಮತ್ತು ಸ್ಟಾಲ್ ಬೋರ್ಡ್ ಉತ್ಪನ್ನ ವಿಭಾಗದಲ್ಲಿ ಪ್ರಾಪ್ತಿ ಈ ಸಾಧನೆ ಮಾಡಿದ್ದಾರೆ.
ಶಿಕ್ಷಕ ದಂಪತಿಗಳಾದ ಪ್ರದೀಪ್ ಶೆಟ್ಟಿ ಬೇಳ ಮತ್ತು ಅಶ್ವಿನಿ ಅವರ ಪುತ್ರಿಯಾಗಿರುವ ಪ್ರಾಪ್ತಿಯ ಸಾಧನೆಗೆ ಶಾಲೆಯ ರಕ್ಷಕ-ಶಿಕ್ಷಕ ಸಂಘ ಅಭಿನಂದನೆ ಸಲ್ಲಿಸಿದೆ.

