ಮಂಜೇಶ್ವರ : ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರ ರಕ್ತಸಾಕ್ಷಿತ್ವ ದಿನಾಚರಣೆ, ಸರ್ದಾರ್ ವಲ್ಲಭಭಾಯಿ ಪಟೇಲ್ ಹಾಗೂ ಉಮ್ಮನ್‌ಚಾಂಡಿಯವರ ಜನ್ಮದಿನಾಚರಣೆ ವಿವಿಧ ಕಾರ್ಯಕ್ರಮಗಳೊಂದಿಗೆ ಮೀಯ ಪದವಿನಲ್ಲಿ ಜರುಗಿತು.
ಮೀಂಜ ಮಂಡಲ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮೀಂಜ ಮಂಡಲ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ದಾಮೋದರ ಮಾಸ್ಟರ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಕಾಂಗ್ರೆಸ್ ಮುಖಂಡ ಪಿ. ಸೋಮಪ್ಪ ಪುಷ್ಪಾರ್ಚನೆಗೈದರು.


ಕಾರ್ಯಕ್ರಮದಲ್ಲಿ ಮೂಸ ಧರ್ಮನಗರ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.
ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ಹರ್ಷಾದ್ ವರ್ಕಾಡಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಮೀಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಉಷಾ ಪೂಂಜ, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಮತಿ ಸೌಮ್ಯ ಕಳಿಯೂರು, ಶ್ರೀಮತಿ ಮಿಸ್ರಿಯಾ, ಕಾಂಗ್ರೆಸ್ ಮುಖಂಡರುಗಳಾದ ಕಂಚಿಲ ಮೊಹಮ್ಮದ್, ಕಾಯಿಂಞ ಹಾಜಿ ತಲೆಕಳ, ಗಂಗಾಧರ ಕೆ, ಹಮೀದ್ ಕಣಿಯೂರು, ಭೌತಿಸ್ ಡಿ’ಸೋಜ, ಶೇಕ್ ಅಬ್ಬಾಸ್, ಅಬ್ದುಲ್ ರಹಿಮಾನ್, ನಾರಾಯಣ ಕುಳೂರು, ಪಳ್ಳಿ ಕುಂಞ ತಲೇಕಳ, ಬಡುವನ್ ಕುಂಞ, ಸೈತ್ ಶೆಟ್ಟಿ, ಉಮ್ಮರ್ ಬೆಜ್ಜ, ನೌಫಲ್ ಮುಂತಾದವರು ಉಪಸ್ಥಿತರಿದ್ದರು. ಮೊಹಮ್ಮದ್ ಹನೀಫ್ ಎಚ್ ಎ ಧನ್ಯವಾದಗೈದರು.

