ಭೀಕರ ರಸ್ತೆ ಅಪಘಾತ: ಬೈಕ್ ಸವಾರರಿಬ್ಬರ ದಾರುಣ ಸಾವು

​

ಕಾಸರಗೋಡು : ಜಿಲ್ಲೆಯ ನೀಲೇಶ್ವರದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ರಾಷ್ಟ್ರೀಯ ಹೆದ್ದಾರಿ ನೀಲೇಶ್ವರದ ಪಡನ್ನಕ್ಕಾಡ್ ನೆಹರೂ ಕಾಲೇಜಿನ ಮುಂಭಾಗ ನಿಲ್ಲಿಸಿದ್ದ ಲಾರಿಯ ಹಿಂಭಾಗಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.

​ ನೀಲೇಶ್ವರದ ಪಡಂಙಾಟ್ ಕೊಯುುವಲ್ ನಿವಾಸಿಗಳಾದ ಅನುರಾಗ್ (22) ಮತ್ತು ಆನಂದ್ ಕುಮಾರ್ (24) ಸಾವನ್ನಪ್ಪಿದ ದುರ್ಧೈರ್ವಿಗಳು.

ಇವರಲ್ಲಿ ಅನುರಾಗ್ ನೀಲೇಶ್ವರದ ವಸಂತ ಹೋಟೆಲ್‌ನಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದರು.
​ನೀಲೇಶ್ವರದಿಂದ ಕಾಞಂಗಾಡಿನ ಕಡೆಗೆ ತೆರಳುತ್ತಿದ್ದ ವೇಳೆ ಸೋಮವಾರ ರಾತ್ರಿ ವೇಳೆ ಈ ದುರ್ಘಟನೆ ನಡೆದಿದೆ.

ಅಪಘಾತಕ್ಕೀಡಾದ ತಕ್ಷಣ ಸ್ಥಳೀಯ ನಾಗರಿಕರು ಇಬ್ಬರನ್ನೂ ಕಾಞಂಗಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!