ಮಂಜೇಶ್ವರ: ಇಲ್ಲಿನ ಉದ್ಯಾವರ ಸಾವಿರ ಜಮಾಅತ್ ಅಧೀನದಲ್ಲಿರುವ ಅಸ್ಸಯ್ಯದ್ ಶಹೀದ್ ವಲಿಯುಲ್ಲಾ ದರ್ಗಾದಲ್ಲಿ ಕಳ್ಳತನಕ್ಕೆ ಯತ್ನಿಸಿದ ಘಟನೆ ನಡೆದಿದೆ.


ಮಸೀದಿಯೊಳಗೆ ಮೊದಲೇ ಬಂದು ಅಡಗಿ ಕುಳಿತಿದ್ದ ಕಳ್ಳ, ರಾತ್ರಿ ವೇಳೆ ದರ್ಗಾದೊಳಗೆ ನುಗ್ಗಿ ಕಾಣಿಕೆ ಡಬ್ಬಿಯಲ್ಲಿದ್ದ ಹಣವನ್ನು ದೋಚಲು ಯತ್ನಿಸಿದ್ದಾನೆ. ಈ ವೇಳೆ ಅಲ್ಲೇ ವಾಸವಾಗಿದ್ದ ಮುತಅಲ್ಲಿಂ (ವಿದ್ಯಾರ್ಥಿಗಳು) ಬರುವುದನ್ನು ಗಮನಿಸಿದ ಕಳ್ಳ, ತಕ್ಷಣ ಅಲ್ಲಿಂದ ಪರಾರಿಯಾಗಿದ್ದಾನೆ.


ಕಳ್ಳನ ಕೃತ್ಯದ ದೃಶ್ಯಗಳು ದರ್ಗಾದ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿವೆ.

ಈ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ನಡೆಸಿದ ಮಂಜೇಶ್ವರ ಪೊಲೀಸರು ಆರೋಪಿಯ ಗುರುತು ಪತ್ತೆಹಚ್ಚಿದ್ದು, ಆತ ಉಳ್ಳಾಲ ನಿವಾಸಿ ಎಂದು ತಿಳಿದುಬಂದಿದೆ.
ತಲೆಮರೆಸಿಕೊಂಡಿರುವ ಆರೋಪಿಯ ಬಂಧನಕ್ಕಾಗಿ ಪೊಲೀಸರು ತೀವ್ರ ಶೋಧ ಕಾರ್ಯ ಮುಂದುವರಿಸಿದ್ದಾರೆ.




