ಕುಂಬಳೆ: ಕುಂಬಳೆ ಮತ್ತು ಪುತ್ತಿಗೆ ಪಂಚಾಯತ್ಗಳ ವ್ಯಾಪ್ತಿಯ ಸುಮಾರು 28 ಮಹಲ್ಗಳನ್ನು ಒಳಗೊಂಡ ಕುಂಬಳೆ ವಲಯ ಸಂಯುಕ್ತ ಜಮಾಅತ್ನ ಖಾಝಿಯಾಗಿ ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಕೊಯ್ಯೋಡ್ ಪಿ.ಪಿ ಉಮರ್ ಮುಸ್ಲಿಯಾರ್ ಅವರ ಪದಗ್ರಹಣ ಸಮಾರಂಭ ನವೆಂಬರ್ 17ರ ಮಂಗಳವಾರ ನಡೆಯಲಿದೆ ಎಂದು ಸಂಯುಕ್ತ ಜಮಾಅತ್ ಪದಾಧಿಕಾರಿಗಳು ತಿಳಿಸಿದ್ದಾರೆ.
ಕುಂಬಳೆ ಪ್ರೆಸ್ ಫೋರಂನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಲಾಯಿತು.

ಸಂಜೆ 4 ಗಂಟೆಗೆ ಕುಂಬಳೆ ಬದ್ರಿಯಾ ನಗರದ ಇಮಾಂ ಶಾಫಿ ಇಸ್ಲಾಮಿಕ್ ಅಕಾಡೆಮಿಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಪಾಣಕ್ಕಾಡ್ ಸಯ್ಯಿದ್ ಮುಈನಲಿ ಶಿಹಾಬ್ ತಂಗಳು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಯ್ಯಿದ್ ಮುಹಮ್ಮದ್ ಮದನಿ ತಂಗಳು ಮೊಗ್ರಾಲ್ ಪ್ರಾರ್ಥನೆಗೆ ನೇತೃತ್ವ ನೀಡಲಿದ್ದಾರೆ. ಸಮಸ್ತ ಖಜಾಂಚಿ ಶೈಖುನಾ ಎಂ.ಟಿ. ಅಬ್ದುಲ್ಲ ಮುಸ್ಲಿಯಾರ್ ಅವರು ಖಾಝಿಗೆ ಶಿರೋವಸ್ತ್ರ ತೊಡಿಸಲಿದ್ದಾರೆ.

ಕುಂಬೋಳ್ ಸಯ್ಯಿದ್ ಕೆ.ಎಸ್. ಅಲಿ ತಂಘಳ್ ಪದವಸ್ತ್ರ ತೊಡಿಸಲಿದ್ದಾರೆ. ಸಮಸ್ತ ಜಿಲ್ಲಾ ಅಧ್ಯಕ್ಷ ಸಯ್ಯಿದ್ ಎಂ.ಎಸ್. ಮದನಿ ತಂಗಳು ಸಂಯುಕ್ತ ಜಮಾಅತ್ನ ಗೌರವಾರ್ಪಣೆ ಸಲ್ಲಿಸಲಿದ್ದಾರೆ. ಸಯ್ಯಿದ್ ಶರಫುದ್ದೀನ್ ತಂಗಳು ರಬ್ಬಾನಿ ಶಾಲು ಹೊದಿಸಲಿದ್ದಾರೆ.
ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಬಿ.ಕೆ. ಅಬ್ದುಲ್ ಖಾದರ್ ಮುಸ್ಲಿಯಾರ್ ಅಲ್ ಖಾಸಿಮಿ ಅಭಿನಂದನಾ ಭಾಷಣ ಮಾಡಲಿದ್ದಾರೆ. ಅಬ್ಬಾಸ್ ಫೈಝಿ ಪುತ್ತಿಗೆ ಅವರು ಖಾಝಿಯವರ ಪರಿಚಯ ಮಾಡಿಕೊಡಲಿದ್ದಾರೆ.

ಸಯ್ಯಿದ್ ಯಹ್ಯಾ ತಂಗಳು ಅಲ್ ಹಾದಿ ಕುಂಬೋಳ್, ಶಾಸಕರಾದ ಎ ಕೆಎಂ ಅಶ್ರಫ್, ಕಲ್ಲಟ್ರ ಮಾಯಿನ್ ಹಾಜಿ, ಕುಂಬಳೆ ಪಂಚಾಯತ್ ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್, ಕಾಸರಗೋಡು ಸಂಯುಕ್ತ ಜಮಾಅತ್ ಅಧ್ಯಕ್ಷ ಎನ್.ಎ. ನೆಲ್ಲಿಕುನ್ನು, ಪ್ರಧಾನ ಕಾರ್ಯದರ್ಶಿ ಎ. ಅಬ್ದುಲ್ ರಹಮಾನ್, ಮಂಗಲ್ಪಾಡಿ–ಪೈವಳಿಕೆ ಸಂಯುಕ್ತ ಜಮಾಅತ್ ಅಧ್ಯಕ್ಷ ಇಬ್ರಾಹಿಂ ಫೈಝಿ ಚೇರಾಲ್, ಪ್ರಧಾನ ಕಾರ್ಯದರ್ಶಿ ಟಿ.ಎ. ಮೂಸ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಸಂಯುಕ್ತ ಜಮಾಅತ್ ಅಧ್ಯಕ್ಷ ಐ.ಕೆ. ಅಬ್ದುಲ್ಲ ಕುಂಜಿ ವಹಿಸಲಿದ್ದಾರೆ. ಪ್ರಧಾನ ಕಾರ್ಯದರ್ಶಿ ಸಯ್ಯಿದ್ ಹಾದಿ ತಂಗಳು ಮೊಗ್ರಾಲ್ ಸ್ವಾಗತಿಸಲಿದ್ದು, ಕಾರ್ಯನಿರ್ವಹಣಾ ಕಾರ್ಯದರ್ಶಿ ಬಿ.എ. ರಹಮಾನ್ ಆರಿಕ್ಕಾಡಿ ವಂದಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಂಯುಕ್ತ ಜಮಾಅತ್ ಅಧ್ಯಕ್ಷ ಐ.ಕೆ. ಅಬ್ದುಲ್ಲ ಕುಂಜಿ, ಪ್ರಧಾನ ಕಾರ್ಯದರ್ಶಿ ಸಯ್ಯಿದ್ ಹಾದಿ ತಂಗಳು, ಕಾರ್ಯನಿರ್ವಹಣಾ ಕಾರ್ಯದರ್ಶಿ ಬಿ.ಇ. ರಹಮಾನ್ ಆರಿಕ್ಕಾಡಿ, ಉಪಾಧ್ಯಕ್ಷರಾದ ಅಬ್ದುಲ್ಲ ಹಾಜಿ ತಾಜ್, ಮುಹಮ್ಮದ್ ಕುಂಜಿ ಕೊಯಿಪ್ಪಾಡಿ ಹಾಗೂ ಕಾರ್ಯದರ್ಶಿ ಎ.ಎಂ. ಮುಹಮ್ಮದ್ ಬದ್ರಿಯಾ ನಗರ ಉಪಸ್ಥಿತರಿದ್ದರು.


