
ಸೂರಂಬೈಲು: ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸುವ ಮೂಲಕ ಸೂರಂಬೈಲು ಸರಕಾರಿ ಪ್ರೌಢಶಾಲೆಯ ಒಂಬತ್ತನೇ ತರಗತಿಯ ವಿದ್ಯಾರ್ಥಿನಿ ಮೇಧ ಮಾದರಿಯಾಗಿದ್ದಾಳೆ.

ಸಾಮಾನ್ಯವಾಗಿ ಹುಟ್ಟುಹಬ್ಬದಂದು ಉಡುಗೊರೆ ಹಾಗೂ ಸಂಭ್ರಮಕ್ಕೆ ಹಣ ಖರ್ಚು ಮಾಡುವ ಬದಲು, ತನ್ನ ಪಾಕೆಟ್ ಮನಿಯನ್ನು ಉಳಿಸಿ ಅದರಿಂದ ಶಾಲೆಗೆ ಕುರ್ಚಿಗಳನ್ನು ಖರೀದಿಸಿ ಕೊಡುಗೆಯಾಗಿ ನೀಡಿದ್ದಾಳೆ.

ಶಾಲೆಯಲ್ಲಿ ನಡೆದ ಅಸೆಂಬ್ಲಿ ಕಾರ್ಯಕ್ರಮದಲ್ಲಿ ಮೇಧ ಕುರ್ಚಿಗಳನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಸುನೀತಾ ಎ. ಅವರಿಗೆ ಹಸ್ತಾಂತರಿಸಿದಳು. ಈ ಸಂದರ್ಭದಲ್ಲಿ ಮೇಧಳ ಪೋಷಕರಾದ ಸತೀಶ್ ಭಟ್ ಎಯ್ಯೂರು ಉಪಸ್ಥಿತರಿದ್ದರು.


