ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರಿಂದ ವಿದ್ವಾನ್ ಯಶವಂತ್ ಎಂ.ಜಿ. ಅವರಿಗೆ ಅಭಿನಂದನೆ

ವಿಶ್ವದಾಖಲೆ ನಿರ್ಮಿಸುವುದು ಸಂತಸದ ಕ್ಷಣವಾದರೆ, ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಾಯಕರನ್ನು ಭೇಟಿಯಾಗಿ ಅಭಿನಂದನೆ ಸ್ವೀಕರಿಸುವುದು ಅವಿಸ್ಮರಣೀಯ ಅನುಭವ ಎಂದು ವಿದ್ವಾನ್ ಶ್ರೀ ಯಶವಂತ್ ಎಂ.ಜಿ. ಸಂತಸ ವ್ಯಕ್ತಪಡಿಸಿದ್ದಾರೆ.

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ ಅವರಿಂದ ಅಭಿನಂದನೆ ಸ್ವೀಕರಿಸಿರುವುದು ಜೀವನದ ಮಹತ್ವದ ಕ್ಷಣವಾಗಿದೆ. ರೈಲ್ವೆ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳನ್ನು ತರುವ ಮೂಲಕ ದೇಶದ ರೈಲ್ವೆ ವ್ಯವಸ್ಥೆಯನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿರುವ ಸಚಿವರನ್ನು ಭೇಟಿಯಾಗುವ ಅವಕಾಶ ದೊರೆತಿರುವುದು ಹೆಮ್ಮೆಯ ಸಂಗತಿ ಎಂದು ಅವರು ತಿಳಿಸಿದ್ದಾರೆ.

ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಸ್ನೇಹಿತರೊಬ್ಬರ ಮೂಲಕ ವಿಶ್ವದಾಖಲೆಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿದ್ವಾನ್ ಶ್ರೀ ಯಶವಂತ್ ಎಂ.ಜಿ. ಅವರನ್ನು ಉಡುಪಿಗೆ ಆಹ್ವಾನಿಸಿದ್ದರು. ಕಾರ್ಯಕ್ರಮದ ಸಂದರ್ಭದಲ್ಲಿ ಕೇಂದ್ರ ಸಚಿವರಿಂದ ಸನ್ಮಾನ ಮಾಡಿಸುವುದಾಗಿ ಸಂಸದರು ಭರವಸೆ ನೀಡಿದ್ದರು. ಆದರೆ, ಇಂತಹ ಶ್ರೇಷ್ಠ ನಾಯಕರೊಂದಿಗೆ ಭೇಟಿಯಾಗಿ ಅಭಿನಂದನೆ ಸ್ವೀಕರಿಸುವ ಅವಕಾಶ ದೊರೆಯುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.

ಉಡುಪಿ ಶ್ರೀಕೃಷ್ಣ ಮಠದಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕರು ಅತ್ಯಂತ ಆತ್ಮೀಯತೆಯಿಂದ ವಿದ್ವಾನ್ ಶ್ರೀ ಯಶವಂತ್ ಎಂ.ಜಿ. ಅವರನ್ನು ಅಭಿನಂದಿಸಿದರು. ಈ ವೇಳೆ ಕುಂದಾಪುರ ರೈಲು ಹೋರಾಟ ಸಮಿತಿಯ ಪ್ರಮುಖರಾದ ಗೌತಮ್ ಶೆಟ್ಟಿ ಅವರು ವಿಶ್ವದಾಖಲೆಯ ಕಾರ್ಯಕ್ರಮದ ಕುರಿತು ಸಚಿವರಿಗೆ ಮಾಹಿತಿ ನೀಡಿದರು. ಇದರಿಂದ ಸಂತಸಗೊಂಡ ಸಚಿವರು ಸಾಧನೆಯನ್ನು ಮೆಚ್ಚಿ ಶುಭ ಹಾರೈಸಿದರು.

ವಿಶ್ವದಾಖಲೆಯ ಸಾಧನೆಯ ಜೊತೆಗೆ ಕೇಂದ್ರ ಸಚಿವರಿಂದ ಅಭಿನಂದನೆ ಸ್ವೀಕರಿಸುವ ಅಪೂರ್ವ ಅವಕಾಶ ದೊರೆತಿರುವುದು ತಮ್ಮ ಪಾಲಿನ ಸುಯೋಗ ಹಾಗೂ ಮರೆಯಲಾಗದ ಅನುಭವ ಎಂದು ವಿದ್ವಾನ್ ಶ್ರೀ ಯಶವಂತ್ ಎಂ.ಜಿ. ಹರ್ಷ ವ್ಯಕ್ತಪಡಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!