ಮಂಜೇಶ್ವರದ ಚರ್ಚ್ ಬೀಚ್ ರಸ್ತೆಯಲ್ಲಿ ಮನೆಯಲ್ಲಿ ಕಳವು

ಮಂಜೇಶ್ವರ: ಮಂಜೇಶ್ವರದ ಚರ್ಚ್ ಬೀಚ್ ರಸ್ತೆಯಲ್ಲಿರುವ ಮನೆಯೊಂದಕ್ಕೆ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಭಾರೀ ಮೌಲ್ಯದ 22 ಪವನ್ ಆಭರಣಗಳನ್ನು ಕದ್ದೊಯ್ದಿದ್ದಾರೆ.

ಮಂಜೇಶ್ವರ ಚರ್ಚ್ ಬೀಚ್ ರಸ್ತೆಯಲ್ಲಿ ವಾಸವಾಗಿರುವ ನವೀನ್ ಮೊಂತೇರೊ ಎಂಬವರ ಮನೆಯಲ್ಲಿ ಕಳವು ನಡೆದಿದೆ.
ಮನೆ ಮಾಲೀಕ ನವೀನ್ ಹಾಗೂ ಕುಟುಂಬ ಏಪ್ರಿಲ್ 21ರಂದು ಸಂದರ್ಶನ ವೀಸಾದಲ್ಲಿ ಕೊಲ್ಲಿ ರಾಷ್ಟ್ರಕ್ಕೆ ತೆರಳಿದ್ದರು.
ಇದೀಗ ಅವರು ಮನೆಗೆ ಹಿಂದಿರುಗಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ.

ಎರಡು ಮಹಡಿಗಳಿರುವ ಮನೆಗೆ ಹಿಂಭಾಗದ ಬಾಗಿಲನ್ನು ಒಡೆದು ಕಳ್ಳರು ಒಳನುಗ್ಗಿದ ಕಳ್ಳರು ಮಲಗುವ ಕೊಠಡಿಯೊಳಗಿನ ಕಪಾಟಿನಲ್ಲಿರಿಸಲಾಗಿದ್ದ ಆಭರಣಗಳನ್ನು ಕದ್ದೊಯ್ದಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಹಾಗೂ ಮಂಜೇಶ್ವರ ಪೊಲೀಸರು ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ.

ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ ಮತ್ತೆ ಕಳ್ಳರು ತಲೆ ಎತ್ತಿರುವುದು ಪ್ರದೇಶವಾಸಿಗಳನ್ನು ನಿದ್ದೆಕೆಡಿಸುವಂತೆ ಮಾಡಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!