“ಭೂದಾನ ಚಳುವಳಿಯೇ, ಭೂಮಸೂದೆ ಕಾಯ್ದೆಗೆ ಪ್ರೇರಣೆ : ಪಿ .ಸೋಮಪ್ಪ

ಮಂಜೇಶ್ವರ : ಮಹಾತ್ಮಾ ಗಾಂಧಿಜಿಯವರ ಅನುಯಾಯಿ, ಸ್ವಾತಂತ್ರ್ಯ ಹೋರಾಟಗಾರ ಆಚಾರ್ಯ ವಿನೋಬಾ ಭಾವೆಯವರ ಭೂದಾನ ಚಳುವಳಿಯಿಂದ ಪ್ರೇರಿತರಾಗಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರು ಭೂಮಸೂದೆ ಕಾಯ್ದೆಯನ್ನು ಜಾರಿಗೆ ತಂದರು. ಉಳುವವನೇ ಹೊಲದೊಡೆಯ ಎಂಬ ಪರಿಕಲ್ಪನೆ ವಿನೋಬಾ ಭಾವೆಯವರದ್ದಾಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಪಿ. ಸೋಮಪ್ಪ ಹೇಳಿದ್ದಾರೆ.

ಅವರು ವರ್ಕಾಡಿಯಲ್ಲಿ ಜರುಗಿದ ಆಚಾರ್ಯ ವಿನೋಬಾ ಭಾವೆಯವರ 130 ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿನೋಬಾ – ವೆಂಕಟೇಶರಾವ್ ಶಾಂತಿ ಸೇನಾ ಫೌಂಡೇಶನ್ ಪ್ರಧಾನ ಸಂಚಾಲಕ ಹರ್ಷಾದ್ ವರ್ಕಾಡಿ ಅಧ್ಯಕ್ಷತೆ ವಹಿಸಿದ್ದರು.

  ಕಾರ್ಯಕ್ರಮದಲ್ಲಿ  ದಾಮೋದರ ಮಾಸ್ತರ್, ಪುರುಷೋತ್ತಮ ಅರಿಬೈಲು, ಹಮೀದ್ ಕಣಿಯೂರು,  ಮೊಹಮ್ಮದ್ ಮಜಾಲು  ವಿನೋದ್ ಕುಮಾರ್ ಪಾವೂರು, ಅಝೀಝ್ ಕಲ್ಲೂರು, ರೋನಿ ಡಿಸೋಜಾ, ಗಂಗಾಧರ ಕೆ. ಪಡ್ಪಿನಕೆರೆ, ಶರ್ಮಿಳಾ ಪಿಂಟೋ, ಜಯಪ್ರಕಾಶ್ ಡಿಸೋಜಾ, ವೇದಾವತಿ ನೀರೊಳಿಕೆ, ಫಿಲೋಮಿನಾ ಮೊಂತೇರೋ, ಶೈಲಜಾ ಕಳಿಯೂರು, ರಾಜೇಶ್ ಡಿಸೋಜಾ, ಅಬುಸಾಲಿ ಗಾಂಧಿನಗರ, ರಾಜೇಶ್ ಪಾಳೆಂಗಿರಿ,  ಹನೀಫ್ ಧರ್ಮನಗರ, ರಾಯಲ್ ಡಿಸೋಜಾ ಮುಂತಾದವರು ಉಪಸ್ಥಿತರಿದ್ದರು.
SHARE
Loading spinner

Leave a Reply

Your email address will not be published. Required fields are marked *

error: Content is protected !!