ಮಂಜೇಶ್ವರ. ಇತಿbಹಾಸ ಪ್ರಸಿದ್ಧ ಉದ್ಯಾವರ ಶ್ರೀ ಅರಸು ಮಂಜಿಷ್ಟಾ ರ್ ಕ್ಷೇತ್ರದ ವರ್ಷಾವಧಿ ಉತ್ಸವ ಮತ್ತು ಐತಿಹಾಸಿಕ ಬಂಡಿ ಉತ್ಸವದ ಆಯನವು ಧ್ವಜಾರೋಹಣದೊಂದಿಗೆ ಆರಂಭಗೊಂಡಿತು.
ನಿನ್ನೆ ರಾತ್ರಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಕ್ಷೇತ್ರದ ತಂತ್ರಿಗಳು, ಕ್ಷೇತ್ರದ ಆಚಾರ ಕೋಲಪಟ್ಟವರು, ಗಡಿ ಪ್ರಧಾನರು, ಗುರಿಕಾರರು, ಹತ್ತು ಸಮಸ್ತರು, ಆಡಳಿತ ಸಮಿತಿ ಮತ್ತು ಉತ್ಸವ ಸಮಿತಿ ಪದಾಧಿಕಾರಿಗಳು ಹಾಗೂ ಸಹಸ್ರ ಸಹಸ್ರ ಸಂಖ್ಯೆಯ ಭಕ್ತರು ಈ ಸಂದರ್ಭದಲ್ಲಿ ಹಾಜರಿದ್ದರು. ಧಾರ್ಮಿಕತೆಯೊಂದಿಗೆ ಮತಸೌಹಾರ್ದತೆಗೆ ಪ್ರಸಿದ್ಧಿಯನ್ನು ಪಡೆದ ಈ ಕ್ಷೇತ್ರದಲ್ಲಿ ಮೇ 14 ರವರೆಗೆ ಜಾತ್ರಾ ಮಹೋತ್ಸವ ಹಾಗೂ ಐತಿಹಾಸಿಕ ಬಂಡಿ ಮಹೋತ್ಸವ ನಡೆಯಲಿದೆ. ಇಂದು ರಾತ್ರಿ ಒಂದು ಗಂಟೆಗೆ ಕೋಟ್ಯಾ ದಯಾನ ಅಣ್ಣ ದೈವದ ನೇಮ ಹಾಗೂ ಕೆರೆದಿಪಾರಾಧನೆ ನಡೆಯಲಿದೆ. ಮೇ ಹತ್ತರಂದು ರಾತ್ರಿಯ ಏಳು ಗಂಟೆಗೆ ನಡುಬಂಡಿ ಉತ್ಸವ, ಅಣ್ಣದೈವದ ನೇಮ, 11ರಂದು ಬೆಳಿಗ್ಗೆ 10:00 ಗಂಟೆಗೆ ತಮ್ಮದೇವದ ನೇಮ ಸಂಜೆ ನಾಲ್ಕು ಗಂಟೆಗೆ ಮುಂಡತ್ತಾಯದೈವದ ನೇಮ ಸಂಜೆ 6:30 ಕ್ಕೆ ಕಡೆ ಬಂಡಿ ಉತ್ಸವ ಹಾಗೂ ಸುಡು ಮದ್ದು ಪ್ರದರ್ಶನ ನಡೆಯಲಿದೆ