ಉದ್ಯಾವರ ದುಬೈ ಸಮಿತಿ ಯುಡಿಸಿ ವತಿಯಿಂದ ಎಸ್ ಎಸ್ ಎಲ್ ಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಮಂಜೇಶ್ವರ: ಉದ್ಯಾವರ ಪ್ರದೇಶದ ದುಬೈನಲ್ಲಿ ನೆಲೆಸಿರುವ ಪ್ರವಾಸಿಗರ ಒಕ್ಕೂಟವಾದ ‘ಉದ್ಯಾವರ ದುಬೈ ಸಮಿತಿ’ ಯುಡಿಸಿ SSLC ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲೂ ‘ಎ ಪ್ಲಸ್’ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿ, ‘ಎಜುಕೇಷನಲ್ ಎಕ್ಸಲೆನ್ಸ್ ಅವಾರ್ಡ್-2026’ ನೀಡಿ ಸನ್ಮಾನಿಸಿತು.

​ಕಳೆದ 40 ವರ್ಷಗಳಿಂದ ಉದ್ಯಾವರ ಪ್ರದೇಶದಲ್ಲಿ ಸಾಮಾಜಿಕ, ಶೈಕ್ಷಣಿಕ, ಕ್ರೀಡಾ ಮತ್ತು ಮಾನವೀಯ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಉದ್ಯಾವರ ದುಬೈ ಸಮಿತಿಯು, ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿರುವ ಪ್ರೋತ್ಸಾಹ ಶ್ಲಾಘನೀಯವಾಗಿದೆ.

​ಮಂಜೇಶ್ವರದ ಎ.ಕೆ. ಗಾರ್ಡನ್‌ನಲ್ಲಿ ನಡೆದ ಸಮಾರಂಭವನ್ನು ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಸೈಫುಲ್ಲ ತಂಙಳ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಂಜೇಶ್ವರದ ವಿವಿಧ ಶಾಲೆಗಳಿಂದ ಫುಲ್ ಎ ಪ್ಲಸ್ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಇಬ್ರಾಹಿಂ ಶಾಹಿದ್ ಎಚ್., ಫಾತಿಮತ್ ಶಜಾ, ಭೂವಿ ಮತ್ತು ಸೃಷ್ಟಿ ಶೆಟ್ಟಿ ಅವರಿಗೆ ನಗದು ಬಹುಮಾನ ಹಾಗೂ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.

ಯುಡಿಸಿ ಉಪಾಧ್ಯಕ್ಷ ಉಮರ್ ಅಹ್ಸನಿ ಉದ್ಯಾವರ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಬಶೀರ್ ಕನಿಲ, ಗ್ರಾಮ ಪಂಚಾಯತ್ ಸದಸ್ಯರಾದ ಮುಕ್ತಾರ್, ಶರೀಫ್ ಪಾವೂರ್, ದಮಾಮ್ ಸಮಿತಿ ನಾಯಕ ನಝೀರ್ ಶಾಫಿ, ಬಾವುಚ್ಚ, ಹಮೀದ್ ಹೊಸಂಗಡಿ, ಎಸ್.ಎಂ. ಬಶೀರ್ ಸೇರಿದಂತೆ ಹಲವು ಗಣ್ಯರು, ಬ್ಲಾಕ್ ಮತ್ತು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಶಿಕ್ಷಕರು ಭಾಗವಹಿಸಿ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

​ಕಾರ್ಯಕ್ರಮದಲ್ಲಿ ಅನ್ವರ್ ಇಸ್ಮಾಯಿಲ್ ಸ್ವಾಗತಿಸಿದರು ಮತ್ತು ಮುಸ್ತಫಾ ವಂದನಾರ್ಪಣೆ ಸಲ್ಲಿಸಿದರು

SHARE
Loading spinner

Leave a Reply

Your email address will not be published. Required fields are marked *

error: Content is protected !!