ಸಾಹಸಿ ಯುವಕನಿಂದ ಪ್ರಾಣಾಪಾಯದಿಂದ ಪಾರಾದ ಯುವತಿ: ಮಂಜೇಶ್ವರದಲ್ಲಿ ಮಾನವೀಯತೆ ಮೆರೆದ ಘಟನೆ

ಮಂಜೇಶ್ವರ: ತುಂಬಿ ಹರಿಯುತ್ತಿದ್ದ ಸುವರ್ಣಗಿರಿ ಹೊಳೆಗೆ ಆಕಸ್ಮಿಕವಾಗಿ ಬಿದ್ದು ಪ್ರವಾಹದಲ್ಲಿ ಕೊಚ್ಚಿಹೋಗುತ್ತಿದ್ದ ಯುವತಿಯೊಬ್ಬರನ್ನು ಸ್ಥಳೀಯ ಯುವಕ ತಮ್ಮ ಜೀವದ ಹಂಗು ತೊರೆದು ರಕ್ಷಿಸಿದ ಅಪರೂಪದ ಘಟನೆ ದೇರಂಬಳದಲ್ಲಿ ಜರುಗಿದೆ.

​ಮೀಂಜ-ಮಂಗಲ್ಪಾಡಿ ಪಂಚಾಯತ್ ಸಂಪರ್ಕಿಸುವ ಶಿಥಿಲಗೊಂಡ ಕಾಲುಸೇತುವೆ ದಾಟುವಾಗ ಅಕ್ಕ-ತಂಗಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಸೇತುವೆ ಮೇಲೆಯೂ ನೀರು ಹರಿಯುತ್ತಿದ್ದುದರಿಂದ ತಲೆಸುತ್ತಿ ಯುವತಿ ಹೊಳೆಗೆ ಬಿದ್ದಿದ್ದಾರೆ. ತಂಗಿಯ ಆಕ್ರಂದನ ಕೇಳಿ ಅದೇ ದಾರಿಯಲ್ಲಿ ಬಂದ ಉದಯಕುಮಾರ್ ಶೆಟ್ಟಿ ತಕ್ಷಣ ಪ್ರವಾಹಕ್ಕೆ ಹಾರಿ ಯುವತಿಯನ್ನು ಸುರಕ್ಷಿತವಾಗಿ ಪಾರು ಮಾಡಿದ್ದಾರೆ.

​ಬಡ ನಿವಾಸಿಗಳು ಮತ್ತು ಕೃಷಿಕರಿಗೆ ಆಧಾರವಾಗಿರುವ ಈ ಅಪಾಯಕಾರಿ ಕಾಲುಸೇತುವೆ ಬದಲಿಗೆ ಹೊಸ ಸೇತುವೆ ನಿರ್ಮಿಸುವಂತೆ ಐದು ವರ್ಷಗಳಿಂದ ಮನವಿ ಮಾಡಿದ್ದರೂ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!